ಉಡುಪಿ: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಜನಾಶೀರ್ವಾದ ಯಾತ್ರೆ ನಗರಕ್ಕೆ ತಲುಪಿದ್ದು, ಇವತ್ತು ಉಡುಪಿಯಲ್ಲಿ ೧೧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಜಾನೆ ೮ ಗಂಟೆಯಿಂದ ಜನಾಶೀರ್ವಾದ ಕಾರ್ಯಕ್ರಮವು ಆರಂಭವಾಗಿದೆ.
ಇವತ್ತು ಮುಂಜಾನೆ ಸಚಿವೆ ಶೋಭಾ ಕರಂದ್ಲಾಜೆ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು. ಕಿಂಡಿಯ ಮೂಲಕ ಕಡಗೋಲು ಕೃಷ್ಣನ ದರ್ಶನ ಮಾಡಿದ ಸಚಿವೆ, ರಥ ಬೀದಿಯಲ್ಲಿ ಇರುವ ಅಷ್ಟ ಮಠಗಳಿಗೆ ಭೇಟಿ ನೀಡಿದ್ರು. ಅನಂತೇಶ್ವರ, ಚಂದ್ರಮೌಳೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಪರ್ಯಾಯ ಅದಮಾರು ಮಠಾಧೀಶರೊಂದಿಗೆ ಸಮಾಲೋಚನೆಯನ್ನು ಶೋಭಾ ಕರಂದ್ಲಾಜೆ ನಡೆಸಿದ್ರು. ಬಳಿಕ ಪರ್ಯಾಯ ಶ್ರೀಗಳು ನೂತನ ಸಚಿವರಿಗೆ ಅದಮಾರು ಸ್ವಾಮೀಜಿ ಗೌರವ ಸಮರ್ಪಣೆ ಮಾಡಿದ್ರು. ಅದಮಾರು ಹಿರಿಯ ಸ್ವಾಮೀಜಿ ವಿಶ್ವ ಪ್ರಿಯ ತೀರ್ಥ ಶ್ರೀಪಾದರನ್ನು ಅದಮಾರು ಮಠದಲ್ಲಿ ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ರು.
ಬಳಿಕ ಶೋಭಾ ಕರಂದ್ಲಾಜೆ ಮಾತನಾಡಿ, ಕೃಷಿಕಾರ್ಯ ಕೃಷ್ಣನಿಗೆ ಪ್ರಿಯವಾಗಿರುವ ಕೆಲಸ. ಕೃಷಿ ಖಾತೆ ನನಗೆ ಸಿಕ್ಕಿದೆ, ಇದು ನನ್ನ ಸೌಭಾಗ್ಯ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ನಾನು ರೈತರಿಗೆ ಸಹಾಯ ಮಾಡಲು ಅವಕಾಶವಾಗಿದೆ ಎಂದು ಹೇಳಿದ್ರು. ರೈತರ ಆದಾಯ ದ್ವಿಗುಣ ಮಾಡಬೇಕು ಎಂಬುದು ಪ್ರಧಾನಿಗಳ ಸಂಕಲ್ಪ. ಪರ್ಯಾಯ ಮಠವು ಕೃಷಿಗೆ ಆದ್ಯತೆ ಕೊಟ್ಟಿದೆ. ಹಲವಾರು ರೈತ ಪರವಾದ ಕೆಲಸಗಳಿಗೆ ಕೃಷಿ ಪ್ರಧಾನ ಕೆಲಸಗಳಿಗೆ ಮಠ ಬೆಂಬಲ ನೀಡುತ್ತಿದೆ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಭಗವಂತನ ಆಶೀರ್ವಾದ ಬೇಕು. ಸ್ವಾಮೀಜಿಗಳ ಆಶೀರ್ವಾದ ಬೇಕು ಎಂದು ಹೇಳಿದರು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.