ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಲಿ ಖುಲ್ಲಂಕುಲ್ಲಾ ಮಟ್ಕಾ ದಂಧೆ: ಅಕ್ರಮ ಚಟುವಟಿಕೆಗೆ ಪೊಲೀಸರೇ ಸಾಥ್.‌!? ಕಣ್ಮುಚ್ಚಿ ಕುಳಿತ್ರಾ ಹಿರಿಯ ಅಧಿಕಾರಿಗಳು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್, ರಾಯಬಾಗ, ಬೈಲಹೊಂಗಲ, ಮೂಡಲಗಿ, ಹುಕ್ಕೇರಿ ತಾಲೂಕಿನ ಹಲವೆಡೆ ಮಟಕಾ ಹಾವಳಿ ಮಿತಿ ಮೀರಿದೆ. ಈ ಮಟ್ಕಾ ದಂಧೆಗೆ ಬೀಟ್ ಪೊಲೀಸರ ಮುಖಾಂತರ ಪಿಎಸ್ಐ ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದು, ಪೊಲೀಸರ ಕರಿ ನೆರಳಲ್ಲೇ ಈ ಮಟ್ಕಾ ದಂಧೆ ನಡೆಯುತ್ತಿದೆ.

ಇನ್ನು ರಾಯಬಾಗ ತಾಲೂಕಿನ ಕುಡಚಿ, ಮೊರಬ ಗ್ರಾಮಗಳಲ್ಲಿ ಕುಲ್ಲಂ ಕುಲ್ಲಾ ಮಟ್ಕಾ ದಂಧೆ ನಡೆಯುತ್ತಿದ್ದು, ಹಾಡ ಹಗಲೇ ಯಾರ ಭಯವೂ ಇಲ್ಲದೇ ಬಹಿರಂಗವಾಗಿ ಬುಕ್ಕಿಗಳು ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕುಡಚಿ ಪೊಲೀಸರ ಕರಿನೆರಳಲ್ಲಿ ಈ ಮಟಕಾ ದಂಧೆ ನಡೆಯುತ್ತಿದ್ದು, ಮಟಕಾ ದಂಧೆಗೆ ಕುಡಚಿ ಪೊಲೀಸರ ಅಭಯವೇ ಕಾರಣ ಎನ್ನಲಾಗಿದೆ. ಎಂಜಲು ಕಾಸಿಗಾಗಿ ಮಟ್ಕಾ ದಂಧೆಗೆ ಕುಮ್ಮಕ್ಕು ನೀಡಿದ್ರಾ..? ಕುಡಚಿ ಪೊಲೀಸರು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕುಡಚಿ ಪೊಲೀಸರ ಕರಿನೆರಳಲ್ಲಿ ಮಟ್ಕಾ ದಂಧೆ ನಡೆಯುತ್ತಿರೊ ಬಗ್ಗೆ ಈ ಹಿಂದೆಯೂ ಪ್ರಜಾ ಟಿವಿ ಕನ್ನಡ ಸುದ್ದಿವಾಹಿನಿ ವರದಿ ಬಿತ್ತರಿಸಿತ್ತು. ಪ್ರಜಾ ವರದಿ ಗಮನಕ್ಕೆ ಬರುತ್ತಿದ್ದಂತೆ ಬೆಳಗಾವಿಯ ದಕ್ಷ ಅಧಿಕಾರಿ, ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಕುಡಚಿ ಪೊಲೀಸರಿಗೆ ಬಿಸಿ ಮುಟ್ಟಿಸಿ ದಾಳಿ ಮಾಡಿಸಿದ್ದರು. ದಾಳಿ ನಡೆಸಿ, ಸ್ವಲ್ಪ ದಿನ ಮಟ್ಕಾ ದಂಧೆ ನಿಲ್ಲಿಸಿದ್ದ ಬುಕ್ಕಿಗಳು, ಇದೀಗ ಮತ್ತೆ ಮಟ್ಕಾ ದಂಧೆ ಶುರುಹಚ್ಚಿಕೊಂಡಿದ್ದು,ಮತ್ತದೇ ಕುಡಚಿ ಪೊಲೀಸರತ್ತ ಬೆರಳು ಮಾಡುವಂತೆ ಮಾಡಿದೆ.

ಇನ್ನು ಪೊಲೀಸರ ಅಭಯವಿಲ್ಲದೇ ಬಹಿರಂಗವಾಗಿ ಮಟ್ಕಾ ಬರೆದುಕೊಳ್ಳಲು ಸಾಧ್ಯವಾ..? ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕುಡಚಿ ಪೊಲೀಸರ ಕಣ್ಣಾಮುಚ್ಚಾಲೆ ಆಟಕ್ಕೆ ಬೆಳಗಾವಿಯ ಎಸ್ಪಿ ಲಕ್ಷ್ಮಣ ನಿಂಬರಗಿ ಬ್ರೇಕ್ ಹಾಕಬೇಕಿದ್ದು, ಇಲಾಖೆಯ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಿಗಿಡುತ್ತಿರೊ ಭ್ರಷ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ಇನ್ನು ಮೊರಬ ಗ್ರಾಮದ ಮಟ್ಕಾ ದಂಧೆಯ ಎಕ್ಸ್ ಕ್ಲೂಸಿವ್ ದೃಶ್ಯಾವಳಿ ನ್ಯೂಸ್90 ಕರ್ನಾಟಕ ಸುದ್ದಿಜಾಲಕ್ಕೆ ಲಭ್ಯವಾಗಿದ್ದು, ಎಲ್ಲರ ಚಿತ್ತ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಸಾಹೇಬರತ್ತ ನೆಟ್ಟಿದೆ.

error: Content is protected !!