ಕೂಗು ನಿಮ್ಮದು ಧ್ವನಿ ನಮ್ಮದು

ಆಗಸ್ಟ್ ೨೩ರ ಒಳಗೆ ಎಲ್ಲಾ ಶಿಕ್ಷಕರಿಗೆ ಲಸಿಕೆ: ಬಿ.ಸಿ.ನಾಗೇಶ್

ನೆಲಮಂಗಲ: ರಾಜ್ಯದಲ್ಲಿ ಆಗಸ್ಟ್‌ ೨೩ ರಿಂದ ಶಾಲಾ ಕಾಲೇಜುಗಳ ಆರಂಭ ಹಿನ್ನೆಲೆ ಆಗಸ್ಟ್ ೨೪ರ ಒಳಗೆ ರಾಜ್ಯದ ಎಲ್ಲಾ ಶಿಕ್ಷಕರಿಗೆ B.E.O ಕಚೇರಿಗಳಲ್ಲಿ ವ್ಯಾಕ್ಸಿನ್ ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಿಕ್ಷಣ ಸಚಿವ B.C.ನಾಗೇಶ್ ಹೇಳಿದ್ರು.
ಬೆಂಗಳೂರು ಹೊರವಲಯ ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ B.C.ನಾಗೇಶ್, ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡು ಶಾಲೆಗಳನ್ನು ರೀ ಒಪನ್ ಮಾಡಲಾಗುತ್ತಿದೆ.

ಕೋವಿಡ್ ಮುಂದಿನ ದಿನಗಳಲ್ಲಿ ಜೀವನದ ಒಂದು ಭಾಗ ಆಗುತ್ತದೆ ಹಾಗೂ ಅದರ ಜೊತೆಗೆ ನಾವೆ ಬದುಕು ಕಲಿಯಬೇಕು. ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಶಿಕ್ಷಣ ವೇಸ್ಟ್‌ ಆಗಿರುವುದು ಎಲ್ಲರಿಗೂ ಗೊತ್ತಿದೆ. ಅಲ್ಲದೇ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿತ್ತು. ಹಾಗಾಗಿ ತಜ್ಞರ ಅಭಿಪ್ರಾಯ ಪಡೆದು ೯,೧೦,೧೧,೧೨ ನೇ ತರಗತಿಗಳನ್ನು ಮತ್ತೆ ಪ್ರಾರಂಭ ಮಾಡುತ್ತಿದ್ದೇವೆ. ಹಾಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಶಿಕ್ಷಣ ಸಚಿವ B.C.ನಾಗೇಶ್ ಹೇಳಿದ್ದಾರೆ.

ಕೋವಿಡ್ ನಿಂದಾಗಿ ಮಕ್ಕಳ ಮೇಲಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಕಳೆದ ಒಂದೂವರೆ ವರ್ಷದಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿರುವ ಕಾರಣದಿಂದಾಗಿ, ರಾಜ್ಯದಲ್ಲಿ ಮತ್ತೆ ಶಾಲೆಗಳನ್ನು ಪುನಾರಂಭಿಸುವುದಾಗಿ ಸರ್ಕಾರ ತಿಳಿಸಿದೆ.

error: Content is protected !!