ಕೂಗು ನಿಮ್ಮದು ಧ್ವನಿ ನಮ್ಮದು

೮೩ ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಣೆ: ಆರ್.ಅಶೋಕ್

ಬೆಂಗಳೂರು: ಈ ಹಿಂದೆಯೇ ೬೧ ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾಗಿ, ಇದೀಗ ಮತ್ತೆ ಹಾನಿಯಾಗಿದೆ. ಹಾಗಾಗಿ ಮತ್ತೆ ಹೊಸದಾಗಿ ೨೨ ತಾಲೂಕುಗಳು, ಒಟ್ಟು ೮೩ ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೊಕ್ ಹೇಳಿದ್ದಾರೆ. ಈ ಕುರಿತು ಮಾದ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್ ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ, ಬಬಲೇಶ್ವರ, ಕೊಲ್ಹಾರ, ಮುದ್ದೆಬಿಹಾಳ, ಮೂಡಿಗೆರೆ ಮತ್ತು ಹೊಸನಗರಗಳನ್ನ ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ.

ಪ್ರವಾಹ ಪೀಡಿತ ಸ್ಥಳಗಳಿಗೆ ಒಂದೆರಡು ಸಲ ನಾನು ಭೇಟಿ ನೀಡಿದ್ದೇನೆ. ಜೊತೆಗೆ ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತೆಗೆದುಕೊಂಡಿದ್ದೇವೆ. ಸಿಡಿಲಿನಿಂದ ಬಹಳ ಜನರು ಸಾಯುತ್ತಿದ್ದಾರೆ. ಅದರ ಬಗ್ಗೆ ಎಚ್ಚರಿಕೆಯ ಯೋಜನೆ ಮಾಡಲಾಗುತ್ತಿದೆ. ಒಂದೂವರೆ ಕಿಲೋ.ಮೀಟರ್ವರೆಗೆ ಕೇಳಿಸುವಷ್ಟು ಮೈಕ್ ಸಿಸ್ಟಮ್ ಅಲರ್ಟ್ ಮಾಡಲಾಗುತ್ತದೆ. ಶೀಘ್ರವೇ ಈ ಹೊಸ ಸಿಸ್ಟಮ್ ಅನ್ನು ಅಳವಡಿಕೆ ಮಾಡುತ್ತೇವೆ ಎಂದು ಆರ್.ಅಶೋಕ್ ತಿಳಿಸಿದ್ರು.

ಚಂಡಮಾರುತದ ಅಬ್ಬರದ ಬಗ್ಗೆಯೂ ಅಲರ್ಟ್ ಮಾಡಲಾಗುತ್ತದೆ. ಇದನ್ನು ಕರಾವಳಿ ಭಾಗದ ೪೦ ಕಡೆ ಅನುಷ್ಠಾನ ಮಾಡುತ್ತೇವೆ. ಅಲಾರಾಂ ಸಿಸ್ಟಂಗಳನ್ನ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರಲಿದೆ. ಒಂದೊಂದು ಸಿಸ್ಟಂಗೆ ೧೨ ಕೋಟಿ ಖರ್ಚಾಗುತ್ತದೆ. ಆರರಿಂದ ಏಳು ಕಿಲೋ.ಮೀಟರ್ವರೆಗೆ ಇದು ಸೈರನ್ ಮಾಡಲಿದೆ. ಮತ್ತು ಇದು ಚಂಡಮಾರುತಗಳ ಸುಳಿವನ್ನು ನೀಡಲಿದೆ. ಎಂದರು

ಇದು ಕರಾವಳಿ ಭಾಗದ ಜನರಿಗೆ, ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದು ಆರ್.ಅಶೋಕ್ ತಿಳಿಸಿದ್ರು. ಮೂಡಿಗೆರೆಯನ್ನು ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಏಕಾಂಗಿಯಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ರು. ಈ ವೇಳೆ ಸರ್ಕಾರ ಭರವಸೆ ನೀಡಿತ್ತು. ಬೆಂಗಳೂರಿನಲ್ಲೂ ೫೦ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆಯೂ ಸೂಚಿಸಿದ್ದೇನೆ.

ತುರ್ತು ಕಾಮಗಾರಿ ಮುಗಿಸುವ ಬಗ್ಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತದೆ. ಮಿತಿಯೊಳಗೆ ಕಾಮಗಾರಿ ಮಾಡುತ್ತಿಲ್ಲ. ನಿರಂತರವಾಗಿ ಕೆಲಸ ನಡೆಯುತ್ತಲೇ ಇರುತ್ತದೆ ಎಂದು ಆರ್.ಅಶೋಕ್ ಹೇಳಿದ್ರು. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಕಲರಿಂಗ್ ಮಾಡುವುದು ಸರಿಯಾಗಿಲ್ಲ. ಕಳಪೆ ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳತ್ತೇನೆ ಎಂದು ತಿಳಿಸಿದ್ರು.

error: Content is protected !!