ಕೂಗು ನಿಮ್ಮದು ಧ್ವನಿ ನಮ್ಮದು

ಶಿವನಗೌಡ ನಾಯಕ್‍ಗೆ ಸಚಿವ ಸ್ಥಾನ ಸಿಗದೆ ಇರುವುದ್ದಕ್ಕೆ ನೋವಾಗಿದೆ: ವಿ.ಸೋಮಣ್ಣ

ರಾಯಚೂರು: ದೇವದುರ್ಗ ಶಾಸಕ ಶಿವನಗೌಡ ನಾಯಕ್‍ಗೆ ಸಚಿವ ಸ್ಥಾನ ಸಿಗದೆ ಇರುವುದ್ದಕ್ಕೆ ಅಸಮಧಾನವಿಲ್ಲ. ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ರು, ಸಿಗದಿದ್ದಕ್ಕೆ ಅವರಿಗೆ ನೋವಿದೆ. V.ಸೋಮಣ್ಣ ನಾನು ಕೂಡ ಶಿವನಗೌಡ ಜೊತೆ ಮಾತನಾಡಿದ್ದೇನೆ, ನಿನ್ನೆ ನನ್ನ ಜೊತೆಯೇ ಶಿವನಗೌಡ ಅವರು ಇದ್ರು. ಎಂದು ಜಿಲ್ಲಾ ಉಸ್ತುವಾರಿ ಸಚಿವ V.ಸೋಮಣ್ಣ ಹೇಳಿದ್ರು.

ರಾಯಚೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ V. ಸೋಮಣ್ಣ, ನಾನೇ ಜಿಲ್ಲೆಯ ಉಸ್ತುವಾರಿ ಸಚಿವ ಆಗಿದ್ದೇನೆ, ಯಾವುದೇ ಸಮಸ್ಯೆಯಿಲ್ಲ. ಶಿವನಗೌಡ ಮತ್ತು ವಿ.ಸೋಮಣ್ಣ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಎಲ್ಲಾ ನಾಯಕರ ಜೊತೆಗು ಶಿವನಗೌಡ ನಾಯಕ್ ಹೊಂದಾಣಿಕೆಯಿಂದ ಹೋಗುತ್ತಾರೆ. ಇನ್ನೂ ೪ ಸಚಿವ ಖಾತೆ ಖಾಲಿ ಇವೆ.

ಆ ಖಾತೆಗಳು ಇನ್ನೂ ಯಾರು ಯಾರಿಗೆ ಸಿಗಲಿದೆ ನೋಡೋಣ ಎಂದು V.ಸೋಮಣ್ಣ ಹೇಳಿದ್ದಾರೆ . ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಪರಮಾಧಿಕಾರ ಎಂದ್ರು. ಹುಕ್ಕಾ ಬಾರ್ ಮತ್ತು ವಾಜಪೇಯಿ ಅವರ ಹೇಳಿಕೆಗಳಿಗೆ ಕುರಿತು ಮಾತನಾಡಿದ ವಿ.ಸೋಮಣ್ಣ , ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಒಂದೇ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ಪ್ರಿಯಾಂಕ ಖರ್ಗೆ, C.T.ರವಿ ಸೇರಿ ಎಲ್ಲರಿಗೂ ಒಳ್ಳೆಯದಾಗಲಿ ಎಂದುV.ಸೋಮಣ್ಣ ಹೇಳಿದ್ರು.

error: Content is protected !!