ಹಾವೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ. ಅದು ಹೇಗೆ ಭವಿಷ್ಯ ಹೇಳಲು ಶುರು ಮಾಡಿದ್ರೋ ನನಗೆ ಗೊತ್ತಿಲ್ಲ ಎಂದು ಕೃಷಿ ಸಚಿವ B.C.ಪಾಟೀಲ್ ಕಿಡಿ ಕಾರಿದ್ರು. ಹಾವೇರಿಯಲ್ಲಿ ಮಾದ್ಯಮದವರ ಜೊತೆಗೆ ಮಾತನಾಡಿರುವ B.C.ಪಾಟೀಲ್, ನಿನ್ನೆ ಬೆಂಗಳೂರಿನಲ್ಲಿ ನಡೆದಿರುವ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಉದ್ಯಮಿಯಾಗಿ ಮುಖ್ಯಮಂತ್ರಿ ಪುತ್ರ ಭರತ್ ಬೊಮ್ಮಾಯಿ ಭಾಗಿಯಾಗಿದ್ರು.
ಆ ವಿಷಯಕ್ಕೂ ಟೀಕೆ ಮಾಡೋದು ಅಂದ್ರೆ ಹೇಗೆ? ಕಾಂಗ್ರೆಸ್ ನವರಿಗೆ ಟೀಕೆ ಮಾಡೋದು ಬಿಟ್ರೆ ಬೇರೆ ಏನು ಗೊತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. BJP ಸರ್ಕಾರವನ್ನ ಅಲ್ಲಾಡಿಸಲು ಯಾರಿಂದಲೂ ಸಾದ್ಯವಾಗುವುದಿಲ್ಲ. ನಾವು ೧೧೮ ಜನ BJP ಯಲ್ಲಿ ಶಾಸಕರಿದ್ದೇವೆ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಿಎಂ ಆಗಿ ಅವಧಿ ಪೂರ್ಣಗೊಳಿಸ್ತಾರೆ. ೨೦೨೩ ರಲ್ಲೂ BJP ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು B.C.ಪಾಟೀಲ್ ಹೇಳಿದ್ದಾರೆ.
ವಾಜಪೇಯಿ, ನೆಹರು ಅಂಥವರ ಬಗ್ಗೆ ನಾವೇ ಆಗ್ಲಿ ಅಥವಾ ಯಾರೇ ಆಗ್ಲಿ ಅವರನ್ನು ಗೌರಿಸಬೇಕಾಗುತ್ತದೆ. ಅಂಥವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಬಾರದು. ಎಂಬುದು ನನ್ನ ವೈಯಕ್ತಿಕ ಭಾವನೆಯಾಗಿದೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ಹೇಳೋಕೆ ಶುರು ಮಾಡಿದ್ದಾರೆ. ಅವರಿಗೆ ಭವಿಷ್ಯದಲ್ಲಿ ನಂಬಿಕೆ ಇಲ್ಲ. ಅದು ಹೇಗೆ ಭವಿಷ್ಯ ಹೇಳಲು ಶುರು ಮಾಡಿದ್ದಾರೋ ನನಗಂತು ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ B.C.ಪಾಟೀಲ್ ಟಾಂಗ್ ನೀಡಿದ್ದಾರೆ.