ಕೂಗು ನಿಮ್ಮದು ಧ್ವನಿ ನಮ್ಮದು

ಇನ್ಮುಂದೆ ಆಗಸ್ಟ್ ೧೪ ರಂದು ವಿಭಜನೆಯ ಕರಾಳ ನೆನಪಿನ ದಿನ ಆಚರಣೆ: ನರೇಂದ್ರ ಮೋದಿ

ನವದೆಹಲಿ: ಆಗಸ್ಟ್ ೧೪ ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಅಂದಿನ ವಿಭಜನೆಯ ನೋವನ್ನ ಎಂದಿಗೂ ಮರೆಯಲು ಆಗುವುದಿಲ್ಲ. ಕಿಡಿಗೇಡಿಗಳ ದ್ವೇಷ, ಹಿಂಸಾಚಾರದ ಪರಿಣಾಮವಾಗಿ ನಮ್ಮ ಲಕ್ಷಾಂತರ ಸಹೋದರ, ಸಹೋದರಿಯರು ಸ್ಥಳಾಂತರಗೊಳ್ಳುವಂತಾಯಿತ್ತು. ಈ ಸಂದರ್ಭದಲ್ಲಿ ಅನೇಕರು ಮರಣಹೊಂದಿದ್ದಾರೆ. ಅಂದಿನ ಹೋರಾಟದ ಕಹಿ ನೆನೆಪು ಹಾಗೂ ನಮ್ಮವರ ತ್ಯಾಗಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತಿ ವರ್ಷವೂ ಆಗಸ್ಟ್ ೧೪ ರಂದು ದೇಶ ವಿಭಜನೆಯ ಕರಾಳ ನೆನೆಪಿನ ದಿನವನ್ನಾಗಿ ಆಚರಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸಮಾಜ, ದೇಶಗಳ ವಿಭಜನೆಯಿಂದ, ಸಾಮರಸ್ಯ ಇಲ್ಲದಿದ್ದರೆ ಆಗುವಂತ ಅಪಾಯಗಳನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜೊತೆಗೆ ಒಗ್ಗಟ್ಟು, ಸಾಮಾಜಿಕ ಸಾಮರಸ್ಯ, ಮಾನವ ಸಬಲೀಕರಣದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕು. ಇವೆಲ್ಲಕ್ಕೂ ಈ ದೇಶ ವಿಭಜನೆಯ ದುರಂತ ನೆನಪಿನ ದಿನ ಸಾಕ್ಷಿಯಾಗಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

error: Content is protected !!