ಬೆಂಗಳೂರು: ರಾಜಕಾರಣಿಗಳಿಗೆ ಒಂದು ರೂಲ್ಸ್, ಜನ ಸಾಮಾನ್ಯರಿಗೆ ಇನ್ನೊಂದು ರೂಲ್ಸ್ ಎನ್ನುವಂತಾಗಿದೆ. ನಮ್ಮ ರಾಜ್ಯದ ಪರಿಸ್ಥಿತಿ. ನಿಷೇಧವಿದ್ರು ನಿನ್ನೆ ಬಿಎಸ್ವೈ, ಇಂದು KPCC ಅಧ್ಯಕ್ಷ D.K ಶಿವಕುಮಾರ್ ಗಾಗಿ ದೇವಸ್ಥಾನದ ಬಾಗಿಲನ್ನು ಓಪನ್ ಮಾಡುವುದರ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಡಿ.ಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾರವರ ಜೊತೆಗೆ ದೊಡ್ಡಬಳ್ಳಾಪುರದ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ದೇಗುಲಕ್ಕೆ ಇವತ್ತು ಮುಂಜಾನೆ ಹೋಗಿ ಪೂಜೆಯನ್ನು ಸಲ್ಲಿಸಿದ್ರು. ಇವರ ಜೊತೆ ಸ್ಥಳೀಯ ಶಾಸಕರಾದ ವೆಂಕಟರಾಮಯ್ಯ ಮತ್ತು ಅವರ ಪತ್ನಿ ಸಹ ಇದ್ರು.
ನಾಗರ ಪಂಚಮಿ, ಆಷಾಢ ಶನಿವಾರದಂದು ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ. ಆದ್ರೆ ರಾಜಕಾರಣಿಗಳು, ಮತ್ತು ಅವರ ಕುಟುಂಬಸ್ಥರು ಹೋದ್ರೆ ರಾಜ ಮಾರ್ಗದಲ್ಲಿ ದೇವರ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ. ಈ ಕುರಿತು ಸಾರ್ವಜನಿಕರು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.
ನಿನ್ನೆ ಮಾಜಿ ಸಿಎಂ ಯಡಿಯೂರಪ್ಪನವರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ತೆರೆಯಲಾಗಿತ್ತು. ವೀಕೆಂಡ್, ವಿಶೇಷ ಮತ್ತು ರಜೆಯ ದಿನಗಳಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಬಂದ್ ಮಾಡಬೇಕೆಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಆದೇಶವನ್ನು ಹೊರಡಿಸಿದ್ರು. ನಾಗರ ಪಂಚಮಿಯಂದು ಭಕ್ತಾದಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆಂಬ ಉದ್ದೇಶದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು.
ಆದ್ರೆ ನಿನ್ನೆ ಬಿಎಸ್ವೈ ಅವರಿಗೋಸ್ಕರ ದೇವಸ್ಥಾನದ ಬಾಗಿಲನ್ನು ತೇಗೆದು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಿಎಸ್ವೈ ಬರುತ್ತಾರೆ ಎಂಬ ಉದ್ದೇಶದಿಂದ ಉಳಿದ ಭಕ್ತರಿಗೂ ದೇವರ ದರ್ಶನ ಪಡೆಯಲು ಅವಕಾಶವನ್ನು ನೀಡಲಾಗಿತ್ತು. ಈ ಮೂಲಕ ಬಿಎಸ್ವೈಗೆ ಮಾತ್ರ ಅವಕಾಶ ಎಂಬ ಆರೋಪ ತಪ್ಪಿಸಿಕೊಳ್ಳುವ ಯತ್ನ ಇದಾಗಿತ್ತು. ಒಟ್ಟಿನಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿಎಸ್ವೈ ಮತ್ತು ಅವರ ಪುತ್ರ ವಿಜಯೇಂದ್ರ ಹಾಗೂ ಶಾಸಕ S.R ವಿಶ್ವನಾಥ್ ಸಾಥ್ ನೀಡಿದ್ರು.