ಕೂಗು ನಿಮ್ಮದು ಧ್ವನಿ ನಮ್ಮದು

ನ್ಯಾಷನಲ್ ಕ್ರಷ್‍ಗೆ ಸೋಶಿಯಲ್ ಮೀಡಿಯಾದಲ್ಲಿ, ಬರೋಬ್ಬರಿ ಎರಡು ಕೋಟಿ ಫಾಲೋವರ್ಸ್

ಬೆಂಗಳೂರು: ಕೊಡಗಿನ ಬೆಡಗಿಯಾದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದ್ರೆ ರಶ್ಮಿಕಾ ಮಂದಣ್ಣ ಇನ್‍ಸ್ಟಾಗ್ರಾಂ ಅಲ್ಲಿ ಬರೋಬ್ಬರಿ ಎರಡು ಕೋಟಿ ಫಾಲೋವರ್ಸ್ ಇದ್ದಾರೆ. ಇನ್‍ಸ್ಟಾಗ್ರಾಂ ಅಲ್ಲಿ ಬರೋಬ್ಬರಿ ಎರಡು ಕೋಟಿ ಅಭಿಮಾನಿಗಳನ್ನು ಹೊಂದುವ ಮೂಲಕವಾಗಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಎನ್ನುವ ಹೆಗ್ಗಳಿಕೆಗೆ ರಶ್ಮಿಕಾ ಪಾತ್ರರಾಗಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಮ್‍ ಅಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಸಿನಿ ದುನಿಯಾದಲ್ಲಿ ನಂಬರ್ ಒನ್ ನಟಿ ಆಗಿರುವ ರಶ್ಮಿಕಾ ತನ್ನ ಜೀವನದ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. ಹ್ಯಾಪಿ ಮೂಡ್ ನಲ್ಲಿ ಇರುವ ನಟಿ ರಶ್ಮಿಕಾ ಮಂದಣ್ಣ ತನ್ನ ಜೀವನದ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. ಮೊದಲು ಥಿಯೇಟರ್‍ನಲ್ಲಿ ನೋಡಿದ ಸಿನಿಮಾ, ಮೊದಲ ಆಡಿಷನ್, ಮೊದಲ ಸಿನಿಮಾ, ಮೊದಲ ತಮಿಳು ಸಿನಿಮಾ, ಮೊದಲ ಹಿಂದಿ ಸಿನಿಮಾ, ಬಾಲಿವುಡ್ ಹಾಡು, ಮೊದಲ ಸ್ಟೇಜ್ ಫರ್ಫಾಮೆನ್ಸ್, ಫಸ್ಟ್ ಇನ್ಸ್ಟಾಗ್ರಾಂ ಪೋಸ್ಟ್, ಫಸ್ಟ್ ಇನ್ಸ್ಟಾಗ್ರಾಂ ರೀಲ್ಸ್, ತಮ್ಮ ಸಾಕು ನಾಯಿ ಜೊತೆಗೆ ತೇಗೆಸಿರುವ ಫಸ್ಟ್ ಪೋಸ್, ಬಾಲ್ಯದ ಫೋಟೋಸ್, ಮೊದಲ ಅವಾರ್ಡ್ ಹೀಗೆ ಕೆಲವು ಹಳೆಯ ನೆನೆಪುಗಳು ತುಂಬಿರುವ ಒಂದು ವೀಡಿಯೋವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲಿ ಸಖತ್ ಬೇಡಿಕೆ ಇರುವ ನಟಿಯಾಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸಿನಿಮಾಗಳಲ್ಲಿ ಮೋಡಿ ಮಾಡಿರುವ ನಟಿ ಮಿಲಿಯನ್ ಗಟ್ಟಲೇ ಜನರ ಪ್ರೀತಿಯನ್ನು ಸೋಶಿಯಲ್ ಮೀಡಿಯಾದಲ್ಲಿಗಳಿಸಿದ್ದಾರೆ. ಸೌತ್ ಇಂಡಿಯಾದ ಸ್ಟಾರ್ ನಟಿ ಮಣಿಯರಿಗಿಂತ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಈ ಕನ್ನಡದ ಬೆಡಗಿ ನಟಿ ರಶ್ಮಿಕಾ.

error: Content is protected !!