ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ BJP ಶಾಸಕ M.P.ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಬೆಕ್ಕಿನ ಮೇಲೆ ತೋರಿಸುತ್ತಿದ್ದಾರೆ ಎಂದು BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ C.T.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ C.T.ರವಿ ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೆನೆ. ಅಧಿಕಾರದ ಸ್ವರ್ಥವು ನನಗೆ ಇದ್ದಿದ್ದರೆ ನಾನು ಮಂತ್ರಿಯಾಗಿಯೇ ಇರುತ್ತಿದ್ದೆ.
ಜೊತೆಗೆ ಅವರು ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ರು. ಅನುದಾನವನ್ನು ಮುಖ್ಯಮಂತ್ರಿ ಹತ್ತಿರ ಕೇಳಬೇಕು, ಇಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ಕೇಳಬೇಕು. ಆದ್ರೆ ಅವರು ನನ್ನ ಹೆಸರನ್ನು ಏಕೆ ಬಳಸುತ್ತಿದ್ದಾರೆ ಇದು ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಅವರ ಗೆಲುವಿಗೆ ನಮ್ಮ ಶ್ರಮವೂ ಸ್ವಲ್ಪ ಇದೆ.
ನನ್ನ ಕುಟುಂಬದ ವೋಟು ಇರುವುದು ಮೂಡಿಗೆರೆ ಕ್ಷೇತ್ರದಲ್ಲಿಯೇ. ನಾವು BJP ಬಿಟ್ಟು ಬೇರೆ ಅವರಿಗೆ ವೋಟು ಹಾಕಿಲ್ಲ. ಅವರು ಅಂಕಿ,ಅಂಶ ತೆಗೆಸಿ ನೋಡ್ಲಿ ನಾವು ಮತ್ರಿಯಾಗಿದ್ದಾಗ ಅತೀ ಹೆಚ್ಚು ಅತಿವೃಷ್ಠಿಯ ಅನುದಾನ ಅವರಿಗೆ ನೀಡಿದ್ದೆವೆ. ನಾನೇ ಅಂಕಿ,ಅಂಶ ತೆಗೆಸಿ ಕೊಡಿಸ್ತೇನಿ ಅತೀ ಹೆಚ್ಚು ಅನುದಾನ ಮೂಡಿಗೆರೆ ಹಾಗೂ ಶೃಂಗೇರಿಗೆ ನೀಡಲಾಗಿದೆ ಬಳಿಕ ಚಿಕ್ಕಮಗಳೂರಿಗೆ ನೀಡಲಾಗಿದೆ.
ನಾನು ಹೇಳಿದ್ದು ಸುಳ್ಳಾದ್ರೆ ಆಮೇಲೆ ಬಂದು ನನಗೆ ಪ್ರಶ್ನೆ ಮಾಡಲಿ. ಇತ್ತೀಚೆಗೆ R.D.P.R ನಲ್ಲೂ ಅತೀ ಹೆಚ್ಚು ಗ್ರ್ಯಾಂಟ್ ಕೊಟ್ಟಿದ್ದು ಮೂಡಿಗೆರೆಗೆ. ಅದು ಅಧಿಕೃತವಾಗಿರುವ ಅಂಶ. ಅವರು ಮನಸಲ್ಲಿ ಬೇರೆ ಏನೋ ಇಟ್ಟುಕೊಂಡು ಈಗ ಇಲ್ಲಿ ಏನೋ ಮಾತನಾಡುತ್ತಿದ್ದಾರೆ ಎಂದು ಅನ್ನಿಸುತ್ತಿದೆ ಎಂದು C.T. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿಕ್ಕಿಂತ ಅತಿ ಹೆಚ್ಚು ಫ್ಲಡ್, R.D.P.R ಮತ್ತು ಲೋಕೋಪಯೋಗಿಯಲ್ಲಿ ಹೆಚ್ಚು ಫಂಡ್ ಹೋಗಿದ್ರೆ ಅವರು M.L.A ಗಿರಿಗೆ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ನನಗೆ ಸಣ್ಣತನದ ರಾಜಕಾರಣ ಮಾಡಿ ಗೊತ್ತಿಲ್ಲ. ಅವರಿಗೆ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ. ನನಗಿದ್ದ ಸಣ್ಣ ಖಾತೆಯಲ್ಲಿ ನನ್ನ ಶಕ್ತಿ ಮೀರಿ ಅವರಿಗೆ ಎಲ್ಲಾ ಕಡೆ ಕೆಲಸ ಮಾಡಿದ್ದೇನೆ. ಅತಿವೃಷ್ಟಿ ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಹೋಗದಿದ್ರೆ ನಾನು ರಾಜೀನಾಮೆ ಕೊಡುತ್ತೇನೆ. ಹೋಗಿದ್ರೆ ಅವರು ರಾಜೀನಾಮೆ ನೀಡ್ತಾರಾ ಎಂದು ಸವಾಲು ಹಾಕಿದ್ದಾರೆ.