ನವದೆಹಲಿ: 3 ಕೃಷಿ ಕಾನೂನು, ಬೆಲೆ ಏರಿಕೆ, ಓಬಿಸಿ ತಿದ್ದುಪಡಿ ಮಸೂದೆ, ಪೆಗಾಸಸ್ ಸೇರಿ ಕೆಲವು ವಿಚಾರಗಳ ಬಗ್ಗೆ ರಾಜ್ಯ ಸಭೆಯಲ್ಲಿ ಮಾತನಾಡಲು ಪ್ರಯತ್ನ ಪಟ್ಟೆ, ಆದ್ರೆ ಯಾವುದೇ ಚರ್ಚೆಯಲ್ಲೂ ನನಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬೇಸರ ಪಟ್ರು. ನವದೆಹಲಿಯಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ದೇವೇಗೌಡರ್ರು, ಗದ್ದಲಗಳ ನಡುವೆ ನಡೆಯುತ್ತಿರುವ ಕಲಾಪಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ರು.
ನನಗೆ 90 ವರ್ಷ, ಆದ್ರು ನಾನು ಒಂದೇ ಒಂದು ಕಲಾಪಕ್ಕೂ ಗೈರಾಗದೇ ಚರ್ಚೆಯಲ್ಲಿ ಭಾಗವಹಿಸಿದ್ದೆ, ಜೊತೆಗೆ ಮಾತನಾಡಲು ಪ್ರಯತ್ನ ಸಹ ಪಟ್ಟೆ. ಆದ್ರೆ ರಾಜ್ಯ ಸಭೆಯಲ್ಲಿ ನಮ್ಮ ಪಕ್ಷದ ಸಂಖ್ಯೆ ಕಡಿಮೆ, ನಾನೊಬ್ಬ ಸದಸ್ಯನಾಗಿರುವ ಕಾರಣ ಮಾತನಾಡಲು ನನಗೆ ಅವಕಾಶವೇ ಸಿಗಲಿಲ್ಲ ಎಂದು ಹೇಳಿದರು. ಕಲಾಪದಲ್ಲಿ ಯಾವುದೇ ವಿಷಯಗಳು ಚರ್ಚೆ ಆಗಿಲ್ಲ. ಚರ್ಚೆ ಮಾಡಲು ನಮ್ಮ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳು ಅವಕಾಶವನ್ನು ಮಾಡಿಕೊಟ್ಟಿಲ್ಲ.
ಎಲ್ಲಾ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕು. ಮುಂದಿನ ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಮುಂದಿನ ದಿನಗಳಲ್ಲಿ ಸಿಗಬಹದು, ಅವಕಾಶ ಸಿಕ್ರೆ ನಾನು ರೈತರ ಸಮಸ್ಯೆಗಳ ಬಗ್ಗೆ ಕಂಡಿತವಾಗಿಯು ಮಾತನಾಡುತ್ತೇನೆ ಎಂದು ದೇವೇಗೌಡರು ಹೇಳಿದರು.
ಈ ವೇಳೆ ಮೋದಿ ಸಂಪುಟದ ಬಗ್ಗೆ ಮಾತನಾಡಿ, ಮೊದಲ ಬಾರಿಗೆ ೧೨ ಮಹಿಳೆಯರಿಗೆ, ೮ ಎಸ್ಸಿ, ೧೨ ಎಸ್ಟಿ ಸಮುದಾಯದ ನಾಯಕರಿಗೆ ಮೋದಿ ತಮ್ಮ ಸಂಪುಟದಲ್ಲಿ ಅವಕಾಶವನ್ನು ಒದಗಿಸಿದ್ರು. ಇದು ಸಾಮಾಜಿಕ ನ್ಯಾಯವೋ, ಅಥವಾ ಚುನಾವಣೆಯ ತಂತ್ರವೋ ಗೊತ್ತಿಲ್ಲ. ಆದ್ರೆ ಅದು ಏನೇ ಇದ್ರು ನರೇಂದ್ರ ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ದೇವೇಗೌಡರು ಹೇಳಿದರು.