ಕೂಗು ನಿಮ್ಮದು ಧ್ವನಿ ನಮ್ಮದು

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ ಎಂಟು ಜನ ನಾಪತ್ತೆ

ಮಾಸ್ಕೋ: ೩ ಸಿಬ್ಬಂದಿ ಮತ್ತು ೧೩ ಜನ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ Mi-೮ ಹೆಲಿಕಾಪ್ಟರ್ ರಷ್ಯಾದ ಕಮ್ಚಟ್ಕಾ ಪ್ರದೇಶದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್ ಅಲ್ಲಿದ್ದ ೮ ಜನ ಪ್ರಾಣಾಪಾಯದಿಂದ ಸೇಪ್ ಆಗಿದ್ದಾರೆ. ಉಳಿದ ೮ ಜನ ನಾಪತ್ತೆ ಆಗಿದ್ದಾರೆ. ನಾಪತ್ತೆ ಆಗಿದ್ದವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಆದ್ರೆ ಇನ್ನೂ ಅವರ ಬಗ್ಗೆ ಯಾವ ಮಾಹಿತಿಯು ಸಿಕ್ಕಿಲ್ಲ.

ಆಗಸ್ಟ್ ೧೨ ರ ಬುಧವಾರ ಕ್ರೊನೊಟ್ಸ್ಕಿ ನೇಚರ್ ರೀಸರ್ವ್ ಬಳಿಯ ವಿಟಜ್-ಏರೋ ವಿಮಾನಯಾನ ಸಂಸ್ಥೆಯ Mi-೮ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿಯು ದೊರೆತಿದೆ, ಎಂದು ರಷ್ಯಾದ ತುರ್ತು ಸಚಿವಾಲಯ ಹೇಳಿದೆ. ಕಮ್ಚಟ್ಕಾದ ಗವರ್ನರ್ ವ್ಲಾಡಿಮಿರ್ ಸೊಲೊಡೋವ್ ಅಪಘಾತವಾದ ಸ್ಥಳಕ್ಕೆ ವೈದ್ಯಕೀಯ ಮತ್ತು ತುರ್ತು ಸೇವಾ ಸಿಬ್ಬಂದಿಯೊಟ್ಟಿಗೆ ಭೇಟಿ ನೀಡಿದ್ರು. ಜೊತೆಗೆ ಪ್ರಾದೇಶಿಕ ಅಭಿಯೋಜಕರು ವಿಮಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನನ್ನು ೩೭ ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದ್ದು, ಇತ್ತೀಚೆಗಷ್ಟೇ ಈ ಹೆಲಿಕಾಪ್ಟರ್ ನಿರ್ವಹಿಸಲು ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.

error: Content is protected !!