ಕೂಗು ನಿಮ್ಮದು ಧ್ವನಿ ನಮ್ಮದು

ಕೇರಳದಿಂದಲೇ 3 ಅಲೆಗೆ ಮುನ್ನುಡಿ, ಎರಡನೇ ಡೋಸ್ ವ್ಯಾಕ್ಸಿನ್ ಪಡೆದವರಲ್ಲೂ ಮತ್ತೆ ಸೋಂಕು ಪತ್ತೆ

ತಿರುವನಂತಪುರ: ಕೇರಳದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಾಯಿದೆ. ಇದೀಗ ಕೋವಿಡ್ ೩ ಅಲೆಗೆ ಮುನ್ನುಡಿ ಬರೆಯುತ್ತಾ ಎಂಬ ಅನುಮಾನವೊಂದು ಎಲ್ಲಡೆ ಮೂಡಿದೆ. ಕೇರಳದಲ್ಲಿ ಲಸಿಕೆ ತೇಗೆದುಕೊಂಡವರನ್ನು ಕೋವಿಡ್ ಮತ್ತೆ ಕಾಡ್ತಾಯಿದೆ. ಎರಡನೇ ಡೋಸ್ ಲಸಿಕೆ ಪಡೆದ ಸಾವಿರಾರು ಜನರಲ್ಲಿ ಈಗ ಮತ್ತೆ ಸೋಂಕು ಪತ್ತೆ.

ಈ ಸುದ್ದಿಯು ಮತ್ತೆ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ವ್ಯಾಕ್ಸಿನ್ ಪಡೆದ ೪೦ ಸಾವಿರಕ್ಕೂ ಹೆಚ್ಚು ಜನರಲ್ಲಿ ಮತ್ತೆ ಸೋಂಕು ಪತ್ತೆಯಾಗಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದವರಲ್ಲೂ ಸೋಂಕು ಸ್ಫೋಟಗೊಂಡಿದೆ. ಪತ್ತನಂತಿಟ್ಟು ಎಂಬಲ್ಲಿ ಸುಮಾರು ೧.೩೫ ಲಕ್ಷ ಕೋರೊನಾ ಪ್ರಕ್ರರಣಗಳು ಪತ್ತೆಯಾಗಿವೆ. ಪಸ್ಟ್ ಡೋಸ್ ಪಡೆದ ೧೪,೯೭೪ ಜನರಲ್ಲಿ ಮತ್ತೆ ಸೋಂಕು ಪತ್ತೆಯಾದ್ರೆ, ಎರಡನೇ ಡೋಸ್ ಪಡೆದ ನಂತರ ೫೦೪೨ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಈ ಪ್ರಮಾಣದಲ್ಲಿ ಹೆಚ್ಚಾಗಲು ಪ್ರಮುಖ ಕಾರಣ ಕಂಟೈನ್ಮೆಂಟ್ ಝೋನ್ ಮಾಡುವುದರಲ್ಲಿ ಕಟ್ಟು ನಿಟ್ಟಿನ ಕ್ರಮ ಅಳವಡಿಸಿಕೊಳ್ಳದೇ ಇರುವುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಅದನ್ನು ಇಲ್ಲಿ ಪಾಲಿಸಿಲ್ಲ. ಅಲ್ಲದೆ ಪರೀಕ್ಷೆಯ ಪ್ರಮಾಣವೂ ಕಡಿಮೆ ಇದೆ ಎಂದು ಕೇಂದ್ರದಿಂದ ಭೇಟಿ ನೀಡಿದ ೬ ಜನ ತಜ್ಞರನ್ನು ಒಳಗೊಂಡ ತಂಡ ಹೇಳಿದೆ. ಒಟ್ಟಿನಲ್ಲಿ ೬ ಜನ ತಂಡದ ಅಧ್ಯಯನದಲ್ಲಿ ಡೆಲ್ಟಾ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕೇರಳದಲ್ಲಿ ೪೦ ಸಾವಿರ ಹೊಸ ಕೋರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕೇರಳ ಕೋವಿಡ್ ನಿಂದ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆತಂಕ ವ್ಯಕ್ತವಾಗಿದೆ.

error: Content is protected !!