ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಸಂಸದರಾಗಿ ಮಾಡುವಂತ ಯಾವ ಕೆಲಸವನ್ನು ಮಾಡುತ್ತಿಲ್ಲ, ಜೊತೆಗೆ ಬೇಡವಾದ ಕೆಲಸವನ್ನು ಮಾಡಿಕೊಂಡು ನಿಂತಿದ್ದಾರೆ ಎಂದು ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಹೇಳಿದ್ರು. ಮಂಡ್ಯದಲ್ಲಿ ಮಾತನಾಡಿರುವ ರವೀಂದ್ರ ಶ್ರೀಕಂಠಯ್ಯನವರು ಸುಮಲತಾ ಅಂಬರೀಶ್ ಅವರು ಸಂಸದೆಯಾಗಿ ಮಾಡಬೇಕಿರುವ ಯಾವ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ.
ಬೇಡವಾದ ವಿಚಾರವನ್ನು ಎತ್ತಿಕೊಂಡು KRS ಉಳಿಸುತ್ತೀನಿ ಎಂದು ಹೋಗುತ್ತಿದ್ದಾರೆ. KRS ಉಳಿಸೋಕೆ ಡ್ಯಾಮ್ ಗೆ ಏನು ಆಗಿಲ್ಲ. ಡ್ಯಾಂ ಸುರಕ್ಷಿತವಾಗಿದೆ. ಇನ್ನೂ ಸುಮಲತಾ ಅವರು ಸಾರ್ವಜಕರಲ್ಲಿ ಅನಾವಶ್ಯಕವಾಗಿ ಗೊಂದಲವನ್ನು ಹುಟ್ಟುಹಾಕುತ್ತಿದ್ದಾರೆ. ಸಂಸದರಿಂದ ಮಂಡ್ಯ ಜಿಲ್ಲೆಯಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಜೊತೆಗೆ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಜಿಲ್ಲೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಗಳಿಗೆ ಕಚ್ಚಾ ವಸ್ತುಗಳು ಪೂರೈಕೆ ಆಗುತ್ತಿಲ್ಲ.
ಜನ ಸಾಮಾನ್ಯರಿಗೆ ಮನೆ ಕಟ್ಟಲು ಕಲ್ಲು, ಜೆಲ್ಲಿ, ಎಂ ಸ್ಯಾಂಡ್ ಸಿಗುತ್ತಿಲ್ಲ, ಬಹಳ ಹಣಕೊಟ್ಟು ತೇಗೆದುಕೊಳ್ಳುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಬಿಎಸ್ವೈ ಅವರು ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಬೇಕೆಂದು ಹೇಳಿದ್ರು. ಆದ್ರೆ ಅಧಿಕಾರಿಗಳು ರಾಜ್ಯಕ್ಕೆ ಒಂದು ಜಿಲ್ಲೆಗೆ ಒಂದು ಕಾನೂನು ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಆದರಿಂದ ಜನರೂ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.
ಸುಮಲತಾ ಅವರು ಬೇಡಾವಾದ ಕೆಲಸವನ್ನು ಬಿಟ್ಟು ಅವರ ಕೆಲಸವನ್ನು ಸರಿಯಾಗಿ ನಿಭಾಯಿಸಬೇಕು. ಜೊತೆಗೆ ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಎಷ್ಟು ಅಂಡರ್ ಪಾಸ್ ಬೇಕು ಎಂದು ಗಡ್ಕರಿ ಅವರ ಬಳಿ ಮಾತನಾಡಲಿ, ಜಿಲ್ಲೆಯಲ್ಲಿ ಸಂಸದರ ಕೆಲಸವನ್ನು ಶಾಸಕರು ಮಾಡಬೇಕಾದಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಶ್ರೀಕಂಠಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ರು.