ಬೆಂಗಳೂರು: ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲೆ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ರಾಜೀನಾಮೆಯನ್ನು ಕೊಡಲು ಮುಂದಾಗಿದ್ದ ವಿಚಾರ ಇವಾಗ ಬೆಳಕಿಗೆ ಬಂದಿದೆ. ಇನ್ನೂ ಜುಲೈ ೨೬ ರಂದು ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆಯನ್ನು ಕೊಡುವ ಮುಂಚಿತವಾಗಿ ಆನಂದ್ ಸಿಂಗ್ ಅವರು ಬಿ.ಎಸ್.ಯಡಿಯೂರಪ್ಪನವರ ನಿವಾಸಕ್ಕೆ ಹೋಗಿ ರಾಜೀನಾಮೆಯ ಪತ್ರವನ್ನು ತೆಗೆದುಕೊಂಡು ಹೋಗಿದ್ರು.
ಇನ್ನೂ ಖಾತೆ ಸರಿ ಇಲ್ಲ, ಜೊತೆಗೆ ಮುಂದೆ ಸರಿ ಹೋಗುತ್ತೋ ಅಥವಾ ಇಲ್ಲವೋ ಎಂದು ಹೇಳಿ ರಾಜೀನಾಮೆಯ ಪತ್ರವನ್ನು ತೆಗೆದುಕೊಂಡು ಹೋಗಿದ್ರು. ಜೊತೆಗೆ ಅವಾಗ ಬಿ.ಎಸ್ ಯಡಿಯೂರಪ್ಪನವರು ಗದರಿ ಮುಂದೆ ಸರಿ ಹೋಗುತ್ತೆ ಹೋಗು ಎಂದು ಕಳುಹಿಸಿದ್ರು. ಇನ್ನೂ ಆಗ ರಾಜೀನಾಮೆಯ ಪತ್ರವನ್ನು ವಾಪಸ್ ತೆಗೆದುಕೊಂಡು ಹೋಗಿದ್ದ ಆನಂದ್ ಸಿಂಗ್ ಅವರು ಇವಾಗ ಮತ್ತೆ ಬಿಎಸ್ವೈ ಅಂಗಳಕ್ಕೆ ರಾಜೀನಾಮೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಇನ್ನೂ ಈಗ ಆನಂದ್ ಸಿಂಗ್ ಒತ್ತಡಕ್ಕೆ ಮಣಿದು ನೂತನ ಸಿಎಂ ಬಸವರಾಜ್ ಬೊಮ್ಮಾಯಿಯವರು ಹೇಳಿ ಖಾತೆ ಬದಲಾಯಿಸ್ತಾರಾ? ಅಥವಾ ಆನಂದ್ ಸಿಂಗ್ ಅವರನ್ನೇ ಬಿಎಸ್ವೈ ಅವರು ಮನ ಒಲಿಸುತ್ತಾರಾ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.