ಧಾರವಾಡ: ಖಾಲಿ ಬಂಡಿ ಓಡಿಸುವಂತ ಸ್ಪರ್ಧೆಯಲ್ಲಿ ಸೋಲನ್ನೇ ಕಾಣದ ಎತ್ತು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಜೊತೆಗೆ ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಕಲ್ಲಪ್ಪ ತೇಗೂರು ಎಂಬುವವರಿಗೆ ಸೇರಿದ ಈ ಎತ್ತು, ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಇಲ್ಲಿಯ ವರೆಗೂ ಸೋಲನ್ನೇ ನೋಡಿಲ್ಲ.
ಇನ್ನೂ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಪಸ್ಟ್, ಮತ್ತು ಹಾನಗಲ್ ತಾಲೂಕಿನಲ್ಲಿ ನಡೆದಂತಹ ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ, ಜೊತೆಗೆ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದಲ್ಲಿ ನಡೆದ ಸ್ಪರ್ಧೆಯಲ್ಲೂ ಪ್ರಥಮ, ಇನ್ನೂ ಹುಲಿಕಟ್ಟಿ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲೂ ಕೂಡ ಪ್ರಥಮ ಸ್ಥಾನವನ್ನು ಈ ಎತ್ತು ಪಡೆದಿದೆ. ಜೊತೆಗೆ ತನ್ನ ಮಾಲೀಕನಿಗೆ ಚಿನ್ನದ ಬಹುಮಾನವನ್ನು ತಂದುಕೊಟ್ಟಿದೆ.
ಇನ್ನೂ ಈ ಎತ್ತಿಗೆ ಸೋಲಿಲ್ಲದ ಸರದಾರ ಎಂದು ಹೆಸರಿಡಲಾಗಿದೆ. ಜೊತೆಗೆ ಬೆಳ್ಳಿಗಟ್ಟಿ ಗ್ರಾಮದ ಮಂದಿಯಲ್ಲ ಸೇರಿಕೊಂಡು ಈ ಎತ್ತಿಗೆ ಸಿಂಗಾರ ಮಾಡಿ, ಕೇಕ್ ಕಟ್ ಮಾಡುವ ಮೂಲಕ ಜನ್ಮ ದಿನವನ್ನು ಆಚರಿಸಿದ್ರು. ಇನ್ನೂ ಇದೆ ವೇಳೆ ಇಡಿ ಗ್ರಾಮವನ್ನೇ ಕರೆದು ಕೆಕ್ ಹಂಚಿರುವ ಮಾಲಿಕ ಕಲ್ಲಪ್ಪ, ಅವರು ಈ ಎತ್ತಿನ ಜನ್ಮದಿನವನ್ನು ನಾನು ಪ್ರತಿ ವರ್ಷ ಆಚರಣೆ ಮಾಡುತ್ತಾ ಬಂದಿದ್ದೆನೆ ಎಂದು ಹೇಳಿದ್ರು.