ಬೆಂಗಳೂರು: ಈ ಹಿಂದೆ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಮ್.ಪಿ. ರೇಣುಕಾಚಾರ್ಯ ಈಗ ಸಾಫ್ಟ್ ಆಗಿದ್ದಾರೆ. ಇನ್ನೂ ಯೋಗೇಶ್ವರ್ ಅವರು ದೆಹಲಿಗೆ ಹೋಗಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕ್ಷೇತ್ರದ ಕೆಲಸ, ವೈಯಕ್ತಿಕ ಕೆಲಸಕ್ಕಾಗಿ ಶಾಸಕರು ದೆಹಲಿಗೆ ಹೋದ್ರೆ ತಪ್ಪೇನಿದೆ? ಶಾಸಕರು ಮಂತ್ರಿ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ? ಜೊತೆಗೆ ಅಂತಿಮವಾಗಿ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಬಿಟ್ಟಂತ ವಿಚಾರ ಎಂದು ಉತ್ತರಿಸಿದ್ರು.
ಇನ್ನೂ ಈ ಹಿಂದೆ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ, ಸೋತವರು ಜೊತೆಗೆ ಮಂತ್ರಿ ಸ್ಥಾನಕ್ಕಾಗಿ ದೆಹಲಿ ಅಲೆಯುತ್ತಿದ್ದಾರೆಂದು ಟೀಕೆ ಮಾಡಿದ್ರು. ಆದ್ರೆ ಈ ಬಾರಿ ದೆಹಲಿಗೆ ಹೋದ್ರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಯೋಗೇಶ್ವರ್ ಅವರ ನಡೆಯನ್ನು ರೇಣುಕಾ ಚಾರ್ಯ ಅವರು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ನಾನು ಯಾವತ್ತೂ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಜೊತೆಗೆ ನನಗೆ ನನ್ನ ಪಕ್ಷ ಸ್ಥಾನ ನೀಡಿದ್ದು ನಾನು ೩ ಬಾರಿ ಶಾಸಕನಾಗಿದ್ದೇನೆ. ಇನ್ನೂ ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಜೊತೆಗೆ ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕ ಒಂದು ಭಾಗವಾಗಿರುವ ಕಾರಣ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಟ್ರೆ ಶೈಕ್ಷಣಿಕವಾಗಿ ಜಿಲ್ಲೆ ಇನ್ನೂ ಅಭಿವೃದ್ಧಿಯಾಗಲಿದೆ. ಇನ್ನೂ ಮುಂದೆ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡುವುದು, ಬಿಡುವುದರ ಬಗ್ಗೆ ಮುಖ್ಯಮಂತ್ರಿ ಮತ್ತು ವರಿಷ್ಠರ ತೀರ್ಮಾನ ಎಂದು ತಿಳಿಸಿದ್ರು.
ಇನ್ನೂ ದಾವಣಗೆರೆ ಮತ್ತು ಹೊನ್ನಾಳಿ ಅವಳಿ ನಗರವಾಗಿದೆ. ಜೊತೆಗೆ ಬಿ.ಎಸ್.ಯಡಿಯೂರಪ್ಪನವರು ೨೦೦೮ ಮತ್ತು ೨೦೦೯ರಲ್ಲಿ ಹೊನ್ನಾಳಿಗೆ ಸಂಪರ್ಕ ಸೇತುವೆ ಕೊಟ್ಟಿದ್ರು. ಇನ್ನೂ ರಾಷ್ಟ್ರಧ್ಯಕ್ಷ J.P ನಡ್ಡಾ, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನಿ ಬಳಿ ಅವಕಾಶ ಕೊಡಿ ಅಂತಾ ನನು ಆಗ ಕೇಳಿದ್ದೆ. ಆದ್ರೆ ವರಿಷ್ಠರ ಮೇಲೆ ನಮಗೆ ಯಾವುದೇ ನೋವಿಲ್ಲ. ನಾನು ೩ ಬಾರಿ ಶಾಸಕನಾಗಿದ್ದೇನೆ. ಜೊತೆಗೆ ನಿಗಮದ ಅಧ್ಯಕ್ಷನಾಗಿದ್ದೆ, ಸಚಿವನಾಗಿದ್ದೆ ಹಾಗಾಗಿ ನಾನು ಇವಾಗ ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ, ಮಾಡುವುದಿಲ್ಲ ಎಂದು ಎಂ.ಪಿ.ರೇಣುಕಾ ಚಾರ್ಯಾ ಅವರು ಹೇಳಿದ್ರು.