ಗಾಂಧಿನಗರ: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿರುವ ನೀರಜ್ ಚೋಪ್ರಾ ಸಾಧನೆಯನ್ನು ಪೇಟ್ರೊಲ್ ಬಂಕ್ ಒನರ್ ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಹೌದು ಗುಜರಾತ್ನ ಭರೂಚ್ ನಲ್ಲಿರುವ ಪೆಟ್ರೋಲ್ ಬಂಕ್ ಒನರ್ ಆಯುಬ್ ಪಠಾಣ್ ಅವರು ವಿಶೇಷ ಆಫರ್ ನೀಡಿವುದರ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದಾರೆ. ಜೊತೆಗೆ ನೀರಜ್ ಎಂಬ ಹೆಸರಿನವರಿಗೆ ೫೦೦ ರೂಪಾಯಿ ವರೆಗೆ ಪ್ರೀ ಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೋಡುವುದರ ಮೂಕಾಂತರ ನೀರಜ್ ಚೋಪ್ರಾ ಗೆಲುವನ್ನು ಸಂಬ್ರಮಿಸಿದ್ದಾರೆ.
ಇನ್ನೂ ೨ ದಿನಗಳ ಕಾಲ ಅಂದ್ರೆ ನಿನ್ನೆ ಸಂಜೆಯ ವರೆಗೂ ಪಠಾಣ್ ಅವರು ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೋಟ್ಟಿದ್ದಾರೆ. ಜೊತೆಗೆ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಗುರುತಿನ ಚೀಟಿ ತೋರಿಸಬೇಕಿತ್ತು. ಆದ್ರೆ ನಿರಜ್ ಅವರ ಹೆಸರು ಇದ್ದರೆ ಸಾಕು ಅವರಿಗೆ ಫ್ರೀ ಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೋಡಲಾಯಿತು. ಇನ್ನೂ ಪಠಾಣ್ ಅವರ ಈ ಕೊಡುಗೆಯನ್ನು ಅನೇಕ ಜನರು ಉಪಯೋಗ ಮಾಡಿಕೊಂಡರು.
ಇನ್ನೂ ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಜೊತೆಗೆ ನೀರಜ್ ಚೋಪ್ರಾ ಅವರ ಈ ಸಾಧನೆಯನ್ನು ಇಡೀ ಭಾರತ ಮೆಚ್ಚಿಕೊಂಡಿದೆ. ಜೊತೆಗೆ ಬರೋಬ್ಬರಿ ೧೨೦ ವರ್ಷಗಳ ನಂತರ ಅಥ್ಲೆಟಿಕ್ ಅಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಡುವ ಮೂಲಕ ೨೩ ವರ್ಷದ ನೀರಜ್ ಚೋಪ್ರಾ ಅವರು ಹೀರೋ ಆಗಿದ್ದಾರೆ. ಇನ್ನೂ ನೀರಜ್ ಚೋಪ್ರಾ ಅವರ ಈ ಗೆಲುವನ್ನು ಅನೇಕ ಜನ ವಿವಿಧ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ರು. ಜೊತೆಗೆ ಅದೇ ರೀತಿ ಪಠಾಣ್ ಅವರು ಕೂಡ ವಿಶೇಷವಾಗಿ ಆಚರಿಸಿ ಸಂತೋಷ ಪಟ್ರು.