ಮಡಿಕೇರಿ: ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಕೊಡಗಿನ BJP ಕಾರ್ಯಕರ್ತರು 100ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ಇನ್ನೂ ಕೊಡಗಿನ ಕುಶಾಲನಗರ ದಿಂದ ೧೦೦ರಕ್ಕೂ ಹೆಚ್ಚು ಜನರು ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದಾರೆ.
ಜೊತೆಗೆ ೫ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಚ್ಚು ರಂಜನ್ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಕಾರ್ಯಕರ್ತರು ಮತ್ತು ಕೊಡಗಿನ ಜನರಲ್ಲಿ ಬಹಳ ನಿರೀಕ್ಷೆಯಿತ್ತು. ಆದ್ರೆ ಹೈಕಮಾಂಡ್ ಶಾಸಕ ಅಪ್ಪಚ್ಚು ರಂಜನ್ ಅವರ ಹೆಸರನ್ನು ಪಟ್ಟಿಯಿಂದ ಕೊನೆ ಕ್ಷಣದಲ್ಲಿ ಕೈಬಿಟ್ಟಿದೆ. ಜೊತೆಗೆ ಇರುವ ೪ ಸಚಿವ ಸ್ಥಾನದಲ್ಲಿ ಒಂದು ಸಚಿವ ಸ್ಥಾನ ಅಪ್ಪಚ್ಚು ರಂಜನ್ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿ ಬೆಂಗಳೂರಿನತ್ತ ಇಂದು ಪ್ರಯಾಣವನ್ನು ಬೆಳೆಸಿದ್ರು.
ಜೊತೆಗೆ ಇವತ್ತು ಮಧ್ಯಾಹ್ನ ೩ ಗಂಟೆಗೆ ಕಾರ್ಯಕರ್ತರಿಗೆ ಭೇಟಿ ಆಗಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಮಯ ನೀಡಿದ್ದು, ಜೊತೆಗೆ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಡಗಿನ BJP ಕಾರ್ಯಕರ್ತರು ಮನವಿ ಸಲ್ಲಿಸಲ್ಲಿದ್ರು. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಪ್ಪಚ್ಚು ರಂಜನ್ ಅವರು ನಾನು ೫ ಬಾರಿ ಶಾಸಕನಾದರೂ ಸಚಿವ ಸ್ಥಾನ ನೀಡದೇ ಇರುವುದು ನನ್ನ ಕಾರ್ಯಕರ್ತರಿಗೆ ಬೇಸರವಾಗಿದೆ. ಹೀಗಾಗಿ ಎಲ್ಲ ಜಿಲ್ಲೆಯ BJP ಕಾರ್ಯಕರ್ತರು ತೀರ್ಮಾನ ಮಾಡಿ ಬೆಂಗಳೂರಿನತ್ತ ಇವತ್ತು ಹೊರಟಿದ್ದಾರೆ. ಜೊತೆಗೆ ಇದರಲ್ಲಿ ನನ್ನ ಪಾತ್ರ ಯಾವುದು ಇಲ್ಲ ಎಂದು ಅಪ್ಪಚ್ಚು ರಂಜನ್ ಅವರು ತಿಳಿಸಿದ್ರು.