ಕೂಗು ನಿಮ್ಮದು ಧ್ವನಿ ನಮ್ಮದು

ಮಾಸ್ಕ್ ಧರಿಸದೆ ಸಾರ್ವಜನಿಕ ಸಭೆಯಲ್ಲಿ, ಕಾಣಿಸಿಕೊಂಡ ಮಹಾರಾಷ್ಟ್ರದ ಮುಖ್ಯಮಂತ್ರಿ

ಮುಂಬೈ: ಹೌದು ಮಹಾರಾಷ್ಟ್ರದ ಸಿಎಂ ಆಗಿರುವ ಉದ್ಧವ್ ಠಾಕ್ರೆಯವರು ಇದೇ ಪ್ರಥಮ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಇನ್ನೂ ೨೦೨೦ ರ ಮಾರ್ಚ್ ವೇಳೆ ಕೋವಿಡ್ ವೈರಸ್ ತಡೆಗಟ್ಟುವ ಸಲುವಾಗಿ ಮಾಸ್ಕ್ ಧರಿಸಲು ಆರಂಭಿಸಲಾಯಿತು.

ಜೊತೆಗೆ ನಾಸಿಕ್‍ ಅಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಉದ್ದವ್ ಠಾಕ್ರೆ ಅವರು, ನಾನು ಮಾಸ್ಕ್ ಇಲ್ಲದೆ ಮಾತನಾಡುತ್ತಿರುವ ನನ್ನ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ. ಜೊತೆಗೆ ನಾನು ಇದೆ ಮೊದಲ ಸಲ ಮಾಸ್ಕ್ ಇಲ್ಲದೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ರು. ಇನ್ನೂ
ಮುಂಬೈನಿಂದ ೨೦೦ ಕಿಲೋ ಮೀಟರ್ ದೂರದಲ್ಲಿರುವ ನಾಸಿಕ್ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲು ಸಮಾರಂಭದಲ್ಲಿ ಉದ್ದವ್ ಠಾಕ್ರೆ ಅವರು ಪಾಲ್ಗೊಂಡಿದ್ರು.

error: Content is protected !!