ಕೂಗು ನಿಮ್ಮದು ಧ್ವನಿ ನಮ್ಮದು

ಬೇಸರವಾದ ಸಚಿವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮಾಧಾನ ಮಾಡುತ್ತಾರೆ: ಸುನಿಲ್ ಕುಮಾರ್

ಉಡುಪಿ: ಖಾತೆ ಹಂಚಿಕೆಯಲ್ಲಿ ಇಬ್ಬರು ಸಚಿವರಿಗೆ ಅಸಮಧಾನ ವಿಚಾರಕ್ಕೆ ಬೇಸರವಾದ ಸಚಿವರನ್ನು ಮುಖ್ಯಮಂತ್ರಿ ಅವರು ಕರೆದು ಮಾತನಾಡುತ್ತಾರೆ. ಜೊತೆಗೆ ಅವರ ಸಮಸ್ಯೆಗಳನ್ನು ಬಗೆಹರಿಸಲು BJP ಯಲ್ಲಿ ಆಂತರಿಕ ವ್ಯವಸ್ಥೆ ಇದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಹೇಳಿದ್ರು.

ಇನ್ನೂ ಬೇಸರ ಮತ್ತು ನೋವನ್ನು ಆಂತರಿಕವಾಗಿ ಕರೆದು ಅದನ್ನು ಬಗೇಹರಿಸಬೇಕಾಗುತ್ತದೆ. ಜೊತೆಗೆ BJP ತನ್ನ ವ್ಯವಸ್ಥೆಯ ಒಳಗೆ ಅದನ್ನು ಸರಿಮಾಡುತ್ತದೆ. ಇನ್ನೂ ದೇವೇಗೌಡರು ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಭೇಟಿ ವಿಚಾರದ ಬಗ್ಗೆ ತಗಾದೆ ತೆಗೆದು ವಿರೋಧಿಸಿದ್ದ ಶಾಸಕ ಪ್ರೀತಂ ಗೌಡ ಅವರ ಬಗ್ಗೆ ನಾನು ಏನು ಪ್ರತಿಕ್ರಿಯೆ ಕೊಡಲ್ಲ. ಆದರೆ ಬದ್ಧತೆ ಮತ್ತು ಕಾರ್ಯಶೈಲಿಯಲ್ಲಿ ವ್ಯತ್ಯಾಸಗಳು ಆಗಬಾರದು ಎಂದು ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ರು.

ಇನ್ನೂ ದೇಶಾದ್ಯಂತ ನಾಳೆ ವಿದ್ಯುತ್ ಇಲಾಖೆಯ ಮುಷ್ಕರವಿದೆ. KPTCL ಕಾರ್ಮಿಕ ಸಂಘಟನೆಗಳು ನನ್ನನ್ನು ಭೇಟಿಯಾಗಿವೆ. ಜೊತೆಗೆ ಖಾಸಗೀಕರಣದ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದ್ರು. ಇನ್ನೂ ಶುಕ್ರವಾರ ಅಥವಾ ಶನಿವಾರ ನಾನು ಇಂಧನ ಇಲಾಖೆಯ ಅಧಿಕಾರ ವಹಿಸಿಕೊಳ್ಳಲಿದ್ದೇನೆ. ಜೊತೆಗೆ ನಮ್ಮ ರಾಜ್ಯ ಮತ್ತು ಇಲಾಖೆಯ ಹಿತಾಸಕ್ತಿಯನ್ನು ನಾವು ಕೂಡ ಕಾಪಾಡುತ್ತೇವೆ. ಎಂದಿದ್ದಾರೆ

ಇನ್ನೂ ಕೇಂದ್ರದ ಬಿಲ್ ಏನಿದೆ ಎಂಬುದನ್ನು ಪರಾಮರ್ಶಿಸುತ್ತೇನೆ. ಜೊತೆಗೆ ಇಲಾಖೆಯ ಅಧಿಕಾರವನ್ನು ವಹಿಸಿಕೊಂಡ ನಂತರ ಈ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ. ಇನ್ನೂ ಹಗರಣಗಳನ್ನು ಹೊರತೆಗೆಯಲು ಬಂದ ಸಚಿವ ನಾನಲ್ಲ, ಇಲಾಖೆಯಲ್ಲಿ ಸುಧಾರಣೆಗಳನ್ನು ಮಾಡಲು ಬಂದವನು. ಇಂಧನ ಇಲಾಖೆಯಲ್ಲಿ ಮತ್ತು ರಾಜ್ಯದಲ್ಲಿ ಸೀಮಿತ ಅವಧಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ರು.

error: Content is protected !!