ಕೂಗು ನಿಮ್ಮದು ಧ್ವನಿ ನಮ್ಮದು

ಹೈಟೆನ್ಷನ್ ವೈರ್ ತಾಗಿದ್ದರಿಂದ ಓರ್ವ ಫೈಟರ್ ಸಾವಾಯ್ತು: ನಟ ಅಜಯ್ ರಾವ್

ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು. ಇನ್ನೂ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಮಾಡುವಾಗ ಫೈಟ್ ಮಾಸ್ಟರ್ ವಿನೋದ್ ಅವರು ಗಮನ ವಹಿಸಬೇಕಿತ್ತು. ಜೊತೆಗೆ ಈ ಮೊದಲೇ ಅಲ್ಲಿ ಹೈಟೆನ್ಷನ್ ವೈರ್ ಇದ್ದಿದ್ದರಿಂದ ನಾನು ಆ ದೃಶ್ಯವನ್ನು ಮಾಡಲ್ಲ ಎಂದು ಹೇಳಿದ್ದೆ ಎಂದು ನಾಯಕ ನಟ ಅಜಯ್ ರಾವ್ ಅವರು ತಿಳಿಸಿದ್ದಾರೆ.

ಇನ್ನೂ ಅಜಯ್ ರಾವ್, ಅಲ್ಲಿ ನನ್ನ ಸೀನ್ ಇರದ ಕಾರಣ ನಾನು ಸ್ವಲ್ಪ ದೂರದಲ್ಲಿ ಕುಂತಿದ್ದೆ. ಇನ್ನೂ ಸಡನ್ ಆಗಿ ಶಾರ್ಟ್ ಸಕ್ರ್ಯೂಟ್ ರೀತಿಯಲ್ಲಿ ಸೌಂಡ್ ಕೇಳಿಸಿದಾಗ, ನನ್ನ ಹುಡುಗರು ಬಂದು ನನಗೆ ವಿಷಯವನ್ನು ಹೇಳಿದ್ರು. ಜೊತೆಗೆ ಕಳೆದ ೫ ದಿನಗಳಿಂದ ಈಗಲ್ ಟನ್ ಬಳಿಯಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಕೋರೊನಾ ಸಂದರ್ಭದಲ್ಲಿ ಚಿತ್ರೀಕರಣ ನಡೆಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ನಮ್ಮ ಟೀಂ ನಿರ್ಮಿಸಿದ ವಾಟರ್ ಟ್ಯಾಂಕ್ ಹತ್ತಿರ ಈ ಫೈಟ್ ಸೀನ್ ಇತ್ತು.

ಇನ್ನೂ ನಾನು ಬೇಡ ಅಂತ ಹೇಳಿದ್ದಕ್ಕೆ ಅಜಯ್ ರಾವ್ ಅವರು ಎಲ್ಲದಕ್ಕೂ ಹಿಂದೇಟು ಹಾಕ್ತಾರೆ ಅನ್ನೋ ಮಾತುಗಳು ಸಹ ಕೇಳಿ ಬಂದವು ಎಂದು ಬೇಸರದ ಮಾತುಗಳನ್ನು ಅಜಯ್ ರಾವ್ ಆಡಿದರು. ಇನ್ನೂ ಒಬ್ಬ ಹುಡುಗ ಹೈಟೆನ್ಷನ್ ವೈರ್ ಬಳಿಯಲ್ಲಿದ್ದನಾ ಅಥವಾ ರೂಪ್ ಎಳೆಯುತ್ತಿದ್ದನಾ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತು ಮತ್ತೋರ್ವ ಹುಡುಗ ಬಿದ್ದು ಗಾಯಗೊಂಡಿದ್ದು ಮಾತ್ರ ನನಗೆ ಆಗ ಕಾಣಿಸಿತು. ಸದ್ಯ ಆ ಹುಡುಗ ಈಗ ಹುಷಾರಾಗಿದ್ದಾನೆ. ಎಂದ್ರು

ಇನ್ನೂ ಆ ಫೈಟರ್ ಅನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಯ್ತು. ಇನ್ನೂ ಇವಾಗಲೂ ಕೂಡ ನನ್ನ ಕೈಕಾಲು ನಡಗುತ್ತಿದೆ. ಇದಾದ ಬಳಿಕ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಫೈಟ್ ಮಾಸ್ಟರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ನನ್ನಿಂದ ಏನಾದ್ರೂ ಸಹಾಯ ಬೇಕಾದ್ರೆ ನಾನು ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿ ನಾನು ಮನೆಗೆ ಆಗಮಿಸಿದೆ ಎಂದು ಅಜಯ್ ಅವರು ತಿಳಿಸಿದ್ರು.

ಇನ್ನೂ ಬಿಡದಿಯ ಈಗಲ್‍ ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣವು ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಈ ಚಿತ್ರೀಕರಣವು ನಡೆಯುತ್ತಿದ್ದು, ಈ ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣ ವಿದೆ. ಇನ್ನೂ ಇವತ್ತು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಹೈಟೆನ್ಷನ್ ವೈರ್ ತಗುಲಿ ೩೫ ವರ್ಷದ ವಿವೇಕ್ ಎಂಬವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

error: Content is protected !!