ಬೆಂಗಳೂರು: ಮಂಡ್ಯಾದ ಸಂಸದೆ ಆಗಿರುವ ಸುಮಲತಾ ಅವರು ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ತಮ್ಮ ಮಗನೊಂದಿಗೆ ತಿರುಪತಿ ತಿಮ್ಮಪ್ಪನಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇನ್ನೂ ಈ ಕುರಿತು ತಮ್ಮ ಇನ್ಸ್ ಸ್ಟಾ ಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿ ಎರಡು ವರ್ಷಗಳ ನಂತರ ತಿಮ್ಮಪ್ಪನ ದರ್ಶನವನ್ನು ಪಡೆದಿರುವುದಾಗಿ ಸುಮಲತಾ ಅಂಬರೀಶ್ ಅವರು ತಿಳಿಸಿದ್ರು.
ಜೊತೆಗೆ ನಾನು ಸುಮಾರು ಎರಡು ವರ್ಷಗಳ ಬಳಿಕ ತಿರುಪತಿ ವೆಂಕಟೇಶ್ವರ ದೇವರ ದರ್ಶನವನ್ನು ಪಡೆದೆ. ಇನ್ನೂ ನನ್ನ ಹುಡುಗರಾದ ದರ್ಶನ್ ತೂಗುದೀಪ ಮತ್ತು ಶ್ರೀನಿವಾಸ್, ಜೊತೆಗೆ ನನ್ನ ಮಗನಾದ ಅಭಿಷೇಕ್ ಅಂಬರೀಶ್ ಮತ್ತು ಪ್ರೆಂಡ್ಸ್ ಜೊತೆ ತಿಮ್ಮಪ್ಪನ ದೇವಸ್ಥಾನಕ್ಕೆ ನಾನು ಭೇಟಿ ನೀಡಿರುವೆ. ಇನ್ನೂ ತಿರುಪತಿಗೆ ಬರುವುದು ಎಂದರೆ ನನಗೆ ಬಹಳ ಸಂತೋಷ ನೀಡುತ್ತದೆ. ಇದರ ಮದ್ಯ ತಿಮ್ಮಪ್ಪನ ದರ್ಶನವನ್ನು ಪಡೇದ್ರೆ ನನಗೆ ಒಂದು ರೀತಿಯಲ್ಲಿ ಮನಸ್ಸಿಗೆ ಸಮಾಧಾನ ವಾಗುತ್ತದೆ.
ಇನ್ನೂ ಇದಲ್ಲದೆ ಎಲ್ಲರ ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಸುಮಲತಾ ಅಂಬರೀಶ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹಲವು ದಿನಗಳ ಹಿಂದೆ KRS ಆಣೆಕಟ್ಟು ಸುತ್ತ ಮುತ್ತಲೂ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧವಾಗಿ ಲೋಕಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಧ್ವನಿ ಎತ್ತಿದ್ರು. ಇನ್ನೂ KRS ಸುತ್ತ ಮುತ್ತಲೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕಾಗಿ ರಾಸಾಯನಿಕ ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ.
ಇನ್ನೂ ಇದರಿಂದ ಅಂತರ್ಜಲದ ಗುಣಮಟ್ಟವು ಸಹ ಕುಸಿಯುತ್ತಿದೆ. ಜೊತೆಗೆ ಇದು ಬೆಳೆಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ. ಇನ್ನೂ ವಾಯುಮಾಲಿನ್ಯದಿಂದ ಜನರಿಗೆ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುಬೇಕೆಂದು ಸುಮಲತಾ ಅಂಬರೀಶ್ ಅವರು ಆಗ್ರಹಿಸಿದ್ರು. ಇನ್ನೂ ಇದರ ಮದ್ಯೆಯೇ ರಾಜಕೀಯದ ಜಂಜಾಟಗಳಿಂದ ತಮ್ಮ ಮನಸ್ಸಿಗೆ ಶಾಂತಿ ಸಿಗಲೆಂದು ಸಂಸದೆ ಸುಮಲತಾ ಅಂಬರೀಶ್ ಅವರು ತಿರುಪತಿ ತಿಮ್ಮಪ್ಪನಿಗೆ ಭೇಟಿ ಕೊಟ್ಟಿದ್ದಾರೆ.