ಕೂಗು ನಿಮ್ಮದು ಧ್ವನಿ ನಮ್ಮದು

ನಾಳೆ ಇಲ್ಲವೇ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಸಚಿವ ಸಂಪುಟ ವಿಸ್ತರಣೆಯನ್ನು ಆದಷ್ಟು ಬೇಗನೆ ಮುಗಿಸಬೇಕು ಎಂಬುದು ಕೇಂದ್ರದ ನಾಯಕರಿಗೂ ಇದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಜೊತೆಗೆ ಮಂಗಳವಾರ ಇಲ್ಲವೇ ಬುಧವಾರ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿ ಸಹ ಇದೆ ಎಂದು ಮಾಜಿ ಸಚಿವ K.S.ಈಶ್ವರಪ್ಪನವರು ತಿಳಿಸಿದ್ರು.

ಇನ್ನೂ ಶಿವಮೊಗ್ಗದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಹೈ ಕಮಾಂಡ್ ಚರ್ಚೆ ನಡೆಸಿದೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕವಾರು ಸಚಿವ ಸ್ಥಾನವನ್ನು ಕೋಡಬೇಕು. ಇನ್ನೂ ಹಿರಿಯರು ಮತ್ತು ಕಿರಿಯರಿಗೂ ಸ್ಥಾನ ಕಲ್ಪಿಸಿ ಕೊಡಬೇಕು. ಎಂಬುದು ಚರ್ಚೆ ನಡೆಯುತ್ತಿದೆ. ಜೊತೆಗೆ ಕೇಂದ್ರದ ನಾಯಕರು ಯಾವುದೇ ಒತ್ತಡಕ್ಕೆ ಮಣಿಯದೇ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಜೊತೆಗೆ ಜಾತಿ ರಾಜಕಾರಣವನ್ನು ಬಿಟ್ಟು BJP ಸೈದ್ದಾಂತಿಕವಾಗಿ, ಸಚಿವ ಸಂಪುಟ ವಿಸ್ತರಣೆಯನ್ನು ಮಾಡಲಿದೆ ಎಂಬುದು ನನಗೆ ನಂಬಿಕೆ ಇದೆ ಎಂದಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಸ್ವಂತ ಬಹುಮತದೊಂದಿಗೆ ಸರ್ಕಾರವು ಅಧಿಕಾರಕ್ಕೆ ಬರಬೇಕು ಎಂಬ ಆಸಕ್ತಿ ಕೂಡ ಹೈಕಮಾಂಡ್ಗೆ ಇದೆ ಎಂದಿದ್ದಾರೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ವೇಳೆಯಲ್ಲಿ ನನ್ನ ಅನುಭವವನ್ನು ಬಳಸಿಕೊಳ್ಳಬೇಕೊ ಅಥವಾ ಬೇಡವಾ ಎಂಬುದನ್ನು ಕೇಂದ್ರದ ನಾಯಕರಿಗೆ ಬಿಟ್ಟಿದ್ದೆನೆ.

ಇನ್ನೂ ಸಿಎಂ ಆಯ್ಕೆ ಯಿಂದ ಹಿಡಿದು ಸಚಿವ ಸಂಪುಟವನ್ನು ಕೃಷ್ಣನ ತಂತ್ರಗಾರಿಕೆ ಯಿಂದ ಬಹಳ ಬುದ್ದಿವಂತಿಕೆಯಿಂದ ಮಾಡಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವ ರೂಪದಲ್ಲಿ ಸಚಿವ ಸಂಪುಟ ಹಾಗೂ ಸರ್ಕಾರ ಇರಬೇಕು ಎಂಬುದನ್ನು ಹೈಕಮಾಂಡ್ ಗಮನಿಸುತ್ತದೆ ಎಂದು k.S ಈಶ್ವರಪ್ಪನವರು ಹೇಳಿದ್ರು.

error: Content is protected !!