ನವದೆಹಲಿ: ಸಿಎಂ ಆಗಿ ಬಸವರಾಜ್ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ನಂತರ ಇದೀಗ 2ನೇ ಬಾರಿಗೆ ದೆಹಲಿಗೆ ತೆರಳಿದ್ದಾರೆ. ಇನ್ನೂ ಸಂಪುಟ ರಚನೆ ಕಸರತ್ತು ನಡೆಯುತ್ತಿದ್ದು, ಇವತ್ತು ರಾತ್ರಿಯೇ ಈ ಬಗ್ಗೆ ಒಂದು ತೀರ್ಮಾನ ಆಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿಯವರು ಹೇಳಿದ್ರು.
ಇನ್ನೂ ನಗರದಲ್ಲಿ ಮಾದ್ಯಮಗಾರರೊಂದಿಗೆ ಮಾತನಾಡಿದ ಸಿಎಂ ಅವರು, ಸಂಜೆ ಪಕ್ಷದ ಸಭೆ ನಡೆಯಲಿದೆ. ಜೊತೆಗೆ ಸಂಪುಟ ರಚನೆ ಬಗ್ಗೆ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎಂದು ತಿಳಿಸಿದ್ದಾರೆ. ಇನ್ನೂ ಮಾಜಿ ಸಚಿವರು ಶಾಸಕರ ಜೊತೆಗೆ ಚರ್ಚೆ ಮಾಡಿದ್ದೀನೆ. ಹಾಗಾಗಿ ಈಗಿನ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನೂ ಒಟ್ಟು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಬೇಕಿದೆ ಎಂದಿದ್ದಾರೆ.
ಇನ್ನೂ ಎಲ್ಲಾ ಶಾಸಕರಿಗೂ ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಗೊತ್ತಿದೆ. ಜೊತೆಗೆ ಪ್ರಾದೇಶಿಕ ಭಾಗವನ್ನು ಗಮನದಲ್ಲಿಟ್ಟುಕೊಂಡು ರಚನೆಯನ್ನು ಮಾಡಲಾವುದು ಎಂದು ಹೇಳಿದ್ದಾರೆ. ಇನ್ನೂ ಇವತ್ತು ಅಂತಿಮ ಸ್ವರೂಪಕ್ಕೆ ಬರಲಿದೆ. ಇನ್ನೂ ಎಷ್ಟು ಹಂತದಲ್ಲಿ ಮಾಡಬೇಕು ಎಷ್ಟು ಜನರು ಇರಬೇಕು ಎಂದು ಇಂದು ಚರ್ಚೆ ಆಗಲಿದೆ. ಇಂದು ರಾತ್ರಿಯೇ ನಿರ್ಣಯವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ಜೊತೆಗೆ ನಾಳೆ ಬೆಂಗಳೂರಿಗೆ ವಾಪಸ್ ಹೋದ್ರೆ ನಾಡಿದ್ದು ಸಂಪುಟ ರಚನೆ ಪಕ್ಕಾ ಎಂದ್ರು. ಇನ್ನೂ ಅಮಿತ್ ಶಾ ಭೇಟಿಗೆ ನಾನು ಪ್ರಯತ್ನ ಮಾಡುತ್ತೇನೆ. ಜೊತೆಗೆ ವಿಜಯೇಂದ್ರ ಸಂಪುಟದಲ್ಲಿ ಇರುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬೊಮ್ಮಾಯಿಯವರು ತಿಳಿಸಿದ್ರು.