ಲಕ್ನೋ: ಹುಟ್ಟುತ್ತಲೇ ಅಂಗವಿಕಲನಾಗಿದ್ದ ಲಕ್ನೋದ ಹುಡುಗ ಕಾಲಿನ ಮೂಕಾಂತರ ಎಕ್ಸಾಂ ಬರೆದು ಶೇಕಡಾ ಎಪ್ಪತ್ತರಷ್ಟು ಅಂಕಗಳನ್ನು ಗಳಸಿ ಉತ್ತೀರ್ಣ ಆಗಿದ್ದಾನೆ. ಇನ್ನೂ ತುಷಾರ್ ವಿಶ್ವಕರ್ಮ ಎಂಬ ಯುವಕ ಪೆನ್ನನ್ನು ಕಾಲಿನಲ್ಲಿ ಹಿಡಿದು ಬರೆಯುವುದನ್ನು ರೂಡಿ ಮಾಡಿಕೊಂಡಿದ್ದನ್ನು ಇದೀಗ ದ್ವಿತೀಯ ಪಿಯುಸಿ ಎಕ್ಸಾಂ ಅಲ್ಲಿ ತನ್ನ ಕಾಲಿನ ಬೆರಳುಗಳ ಸಹಾಯದಿಂದ ಪರೀಕ್ಷೆಯನ್ನು ಬರೆದು ಶೇಕಡಾ ಎಪ್ಪತ್ತರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿದ್ದಾನೆ.
ಜೊತೆಗೆ ಸೃಜನಶೀಲ ಕಾನ್ವೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತಾನು ಹುಟ್ಟಿದಾಗಿಂದಲು ತನ್ನ ಕೈಗಳನ್ನು ಕಳೆದುಕೊಂಡಿದ್ದನು. ಆದ್ರೆ ಅದನ್ನು ನನ್ನ ಅಸಹಾಯಕತೆ ಎಂದು ಭಾವಿಸಲಿಲ್ಲ. ಜೊತೆಗೆ ತನ್ನ ಇಬ್ಬರು ಸಹೋದರೊಂದಿಗೆ ಶಾಲೆಗೆ ಹೋಗುವಾಗ, ನಾನು ಕೂಡ ಶಾಲೆಗೆ ಹೋಗಬೇಕೆಂದು ನಿರ್ಧರಿಸಿ ಪೋಷಕರಿಗೆ ಕೇಳಿಕೊಂಡಿದ್ದ. ತದನಂತರ ನನ್ನ ಕೈಯಲ್ಲಿ ಬರೆಯಲು ಅಸಾಧ್ಯ ಎಂದು ನನ್ನ ಸಹೋದರರಿಗೆ ನನ್ನ ಬದಲಾಗಿ ಬರೆಯುವಂತೆ ಪೋಷಕರು ಹೇಳುತ್ತಿದ್ರು.
ಇನ್ನೂ ಆಗ ನಾನು ನನ್ನ ಪಾದಗಳನ್ನು ನನ್ನ ಕೈಗಳಾಗಿ ಮಾಡಿಕೊಂಡು ಬರೆಯಲು ಆರಂಭಿಸಿದೆ. ಅಲ್ಲದೇ ಪರೀಕ್ಷೆ ಬರೆಯಲು ನಾನು ಕಪ್ಪು ಮತ್ತು ನೀಲಿ ಬಣ್ಣದ ಪೆನ್ನುಗಳನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಇನ್ನೂ ತುಷಾರ್ ತಂದೆ ಸಣ್ಣ ವ್ಯಾಪಾರವೊಂದನ್ನು ಮಾಡುತ್ತಿದ್ದು ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ಜೊತೆಗೆ ತುಷಾರ್ಗೆ ಮುಂದೆ ಇಂಜಿನಿಯರ್ ಆಗುವ ಆಸೆಯಿದೆಯಂತೆ.ಇನ್ನೂ ಇದಕ್ಕೆ ಅಂಗವೈಕಲ್ಯತೆ ಅಡ್ಡಬರುವುದಿಲ್ಲ. ಜೊತೆಗೆ ಕಲಿಕೆಯಲ್ಲಿ ಆಸಕ್ತಿವೊಂದಿದ್ರೆ ಸಾಕು ನಾವು ಏನನ್ನು ಬೇಕಾದ್ರು ಸಾಧಿಸಬಹುದು ಎಂಬುವುದಕ್ಕೆ ಇದೊಂದು ಸ್ಫೂರ್ತಿದಾಯಕ ಕಥೆ ಆಗಿದೆ ಎಂದು ಹೇಳಬಹುದು.