ಕೂಗು ನಿಮ್ಮದು ಧ್ವನಿ ನಮ್ಮದು

ಚಿತ್ರೀಕರಣದ ವೇಳೆ ಜಾರಿ ಬಿದ್ದು ನಟಿ ಶಾನ್ವಿಗೆ ಗಾಯ

ಬೆಂಗಳೂರು: ಸ್ಯಾಂಡಲ್‍ವುಡ್ನ ನಟಿ ಶಾನ್ವಿ ಶ್ರೀವಾಸ್ತವ್ ಶೂಟಿಂಗ್ ಸಮಯದಲ್ಲಿ ಬ್ಯಾಲೆನ್ಸ ತಪ್ಪಿ ಗಾಯಗೊಂಡಿದ್ದಾರೆ. ಇನ್ನೂ ಬ್ಯಾಂಗ್ ಸಿನಿಮಾದಲ್ಲಿ ಪ್ರಥಮ ಬಾರಿಗೆ ಶಾನ್ವಿ ಗ್ಯಾಂಗ್‍ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಪಿಚ್ಚರ್ನ ಆ್ಯಕ್ಷನ್ ದೃಶ್ಯಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದ್ರು. ಇನ್ನೂ ಶೂಟಿಂಗ್ ಸಮಯದಲ್ಲಿ ವರುಣನ ಎಫೆಕ್ಟ್ನಿಂದ ಚಿತ್ರೀಕರಣ ಮಾಡುವಾಗ ಶಾನ್ವಿ ಶ್ರೀವಾಸ್ತವ್ ಬ್ಯಾಲೆನ್ಸ ತಪ್ಪಿ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅದರಿದ್ದಾಗಿ ಶಾನ್ವಿಯನ್ನು ತಕ್ಷಣವೇ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲಾಗಿದೆ.

ಚಿತ್ರತಂಡ, ಬ್ಯಾಂಗ್ ಪಿಚ್ಚರ್ ಆ್ಯಕ್ಷನ್ ಸಿಕ್ವೇನ್ಸ್ ನನ್ನು ಶೂಟಿಂಗ್ ಮಾಡಲಾಗುತ್ತಿತ್ತು. ೯ ರಿಂದ ೧0 ಗಂಟೆಗಳ ಕಾಲ ಚಿತ್ರೀಕರಣ ನಡೆಯುತ್ತಿತ್ತು. ಆ ಸಮಯದಲ್ಲಿ ಶಾನ್ವಿ ಬ್ಯಾಲೆನ್ಸ ತಪ್ಪಿ ಕೆಳಗೆ ಬಿದ್ದು, ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅದೃಷ್ಟ ಯಾವುದೇ ಅಪಾಯವಾಗಿಲ್ಲ. ಸದ್ಯ ಶಾನ್ವಿ ಆರಾಮಾಗುತ್ತಿದ್ದಾರೆ.ಇನ್ನೂ ಇದೀಗ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇನ್ನೂ ಈ ಪಿಚ್ಚರ್ ಗೆ ಶ್ರೀ ಗಣೇಶ್ ಪರಶುರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸದಾ ಗ್ಲಾಮರ್ ಅಭಿನಯದಲ್ಲಿ ಕಾಣಿಸುತ್ತಿದ್ದ ಶಾನ್ವಿ ಇದೇ ಪ್ರಥಮ ಬಾರಿಗೆ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಲ್ಲಲಿದ್ದಾರೆ.ಅದಲ್ಲದೇ ಸ್ಟಂಟ್ ಮಾಸ್ಟರ್ ಚೇತನ್ ಶಾನ್ವಿಗೆ ಫೈಟಿಂಗ್ ಹೇಳಿಕೊಡುತ್ತಿದ್ದಾರೆ.

error: Content is protected !!