ಟೋಕಿಯೋ: ಇಂಡಿಯಾದ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿದ್ದು, ಪ್ರಥಮ ಬಾರಿ ಒಲಿಂಪಿಕನಲ್ಲಿ ಸೆಮಿ ಫೈನಲ್ ಗೆ ತಲುಪಿದೆ. ಇನ್ನೂ ಕ್ವಾರ್ಟರ್ ಫೈನಲ್ ನಲ್ಲಿ ೩ ಸಲ ಒಲಿಂಪಿಕ್ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡವನ್ನು ಇಂಡಿಯಾ ೧-0 ಅಂತರದಿಂದ ಆಸ್ಟ್ರೇಲಿಯಾ ತಂಡಕ್ಕೆ ಸೋಲನ್ನುನ್ನಿಸಿದೆ.
ಇನ್ನೂ ಭಾರತದ ಗುರ್ಜಿತ್ ಕೌರ್ ೨೨ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭವನ್ನು ತೆಗೆದುಕೊಂಡುಗೋಲ್ ದಾಖಲಿಸಿದ್ರು. ಅಗಸ್ಟ್ ೪ರಂದು ನಡೆಯುವ ಪಂದ್ಯದಲ್ಲಿ ಅರ್ಜೆಂಟಿನಾ ವಿರುದ್ಧ ಇಂಡಿಯಾ ಸೆಮಿಫೈನಲ್ ಆಡಲಿದೆ. ಇನ್ನೂಅರ್ಜೆಂಟಿನಾ ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿ ತಂಡವು ೩-0 ಅಂತರದಲ್ಲಿ ಸೆಮಿಫೈನಲ್ಗೆ ಪ್ರವೇಶಿಸುತಿದೆ. ಹಾಕಿ ಆಟದಲ್ಲಿ ಇಂಡಿಯಾ ಮುಂದೆ ಸಾಗುತಿದ್ದು, ೨ ದಿನದಲ್ಲಿ ೨ ಗೆಲುವನ್ನು ಪಡೆದಿದೆ. ಇನ್ನೂ ರವಿವಾರ ಪುರುಷರ ಹಾಕಿ ಟೀಂ ೪೧ ವರ್ಷಗಳ ನಂತರ ಒಲಿಂಪಿಕ್ ಸೆಮಿಫೈನಲ್ ಗೆ ಬಂದಿದೆ. ಭಾರತ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ತಂಡಕ್ಕೆ ೩-೧ ಅಂತರಗಳಿಂದ ಸೋಲಿಸಿ ಸೆಮಿಫೈನಲ್ ತಮ್ಮ ಸ್ಥಾನವನ್ನು ಇರಿಸಿಕೊಂಡಿದೆ.