ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆಯ ಜೊತೆಗೆ DCM ಆಯ್ಕೆಯ ವಿಚಾರವು ಸಹ ಎಲ್ಲಡೆ ಹೆಚ್ಚು ಸದ್ದು ಮಾಡುತ್ತಿದೆ. ಜೊತೆಗೆ ಬಿಎಸ್ವೈ ಅವರ ಅವಧಿಯಲ್ಲಿ DCM ಗಳಾಗಿದ್ದ ಅಶ್ವತ್ಥ್ ನಾರಾಯಾಣ್ ಮತ್ತು ಲಕ್ಷ್ಮಣ್ ಸವದಿ ಹಾಗೂ ಗೋವಿಂದ ಕಾರಜೋಳ ಮತ್ತೆ ಇವಾಗ ಮುಂದುವರಿಯುತ್ತಾರಾ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಈಗ ಉತ್ತರ ಸಿಗಬೇಕಿದೆ. ಇನ್ನೂ ಈ ನಡುವೆಯೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಾತ್ರ ಉಪ ಮುಖ್ಯಮಂತ್ರಿಗಳ ಆಯ್ಕೆಯ ಜವಬ್ದಾರಿಯನ್ನು BJP ವರಿಷ್ಠರ ಹೆಗಲಿಗೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ DCM ಆಯ್ಕೆಯನ್ನು ನೀವೇ ಮಾಡಿಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ. ಇನ್ನೂ ಈ ಮೂವರನ್ನು ಮುಂದುವರಿಸಬೇಕೋ ಅಥವಾ ಒಬ್ಬರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಬೇಕೋ ಇಲ್ಲವೇ ಮೂವರನ್ನ ಮುಂದುವರಿಸೋದರ ಜೊತೆ ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಕುರಿತಾಗಿ BJP ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಇವಾಗ ಜೋರಾಗಿ ನಡೆಯುತ್ತಿವೆ. ಜೊತೆಗೆ DCM ಆಯ್ಕೆಯ ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಬಸವರಾಜ್ ಬೊಮ್ಮಾಯಿಯವರು ಹೈಕಮಾಂಡ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಒಕ್ಕಲಿಗ, ಎಸ್ಸಿ, ಲಿಂಗಾಯತ ಬದಲು ಒಕ್ಕಲಿಗ, ಎಸ್ಸಿ, ಎಸ್ಟಿಗೆ ಈ ಭಾರಿ ಹೊಸ ಅವಕಾಶವನ್ನು ನೀಡಿ. ಜೊತೆಗೆ ಗೋವಿಂದ ಕಾರಜೋಳ ಅವರನ್ನು ಮುಂದುವರಿಸಿ ಇಲ್ಲವಾದರೆ ಅರವಿಂದ್ ಲಿಂಬಾವಳಿಗೆ ಆಯ್ಕೆ ಮಾಡಬಹುದು. ಹಾಗೆಯೇ ಒಕ್ಕಲಿಗ ಪೈಕಿ ಅಶ್ವತ್ಥ್ ನಾರಾಯಣ್, ಎಸ್ಟಿಯಿಂದ ಶ್ರೀರಾಮುಲು ಅವರಿಗೆ ಅವಕಾಶವನ್ನು ಕೋಡಬಹುದು,ಆಥವಾ ಸುನಿಲ್ ಕುಮಾರ್ ಕಾರ್ಕಳಗೆ ಅವಕಾಶ ಕೊಡುವ ಕುರಿತು ಹೈಕಮಾಂಡ್ ತೀರ್ಮಾನಿಸಿದ್ದು, ಇವತ್ತಿನ ಸಭೆ ನಂತರ ಅಂತಿಮ ತೀರ್ಮಾನವಾಗಲಿದೆ. ಹಾಗೂ ಲಕ್ಷ್ಮಣ ಸವದಿಗೆ ಕೊಕ್ ನೀಡುವ ಸಾಧ್ಯತೆಗಳು ಹೆಚ್ಚಿವೆ. ಎನ್ನಲಾಗುತ್ತಿದೆ.