ಬೆಂಗಳೂರು: ರಾಜ್ಯದ ಸಿಎಂ ಸ್ಥಾನ ಅಲಂಕಾರಿಸಿಕೊಂಡ ನಂತರ ಮೊದಲ ಬಾರಿ ಮಾಜಿ ಪ್ರಧಾನಿ ಹಿರಿಯ ರಾಜಕಾರಣಿ ದೇವೇಗೌಡರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೇಟಿ ಮಾಡಿದ್ದಾರೆ.
ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡ ಅವರನ್ನು ಸೌಹಾರ್ದ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸೋಮಣ್ಣ, ರೇವಣ್ಣ ಹಾಗೂ ಶಾಸಕರಾದ ಶ್ರೀ ಜ್ಯೋತಿ ಗಣೇಶ್ ಇದ್ದರು.
ಇನ್ನು ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಶುಭ ಕೋರಿದರು. ಇನ್ನು ಇದೇ ವೇಳೆ ಸಿಎಂ ದೇವೇಗೌಡರ ಆರ್ಶಿವಾದ ಪಡೆದರು. ರಾಜ್ಯದ ವಿಷಯ ಬಂದಾಗ ಎಲ್ಲರೂ ಒಂದೇ. ಅವರ ಮಾರ್ಗದರ್ಶನ ಪಡೆದುಕೊಂಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.