ಬೆಳಗಾವಿ: ಜಿಲ್ಲೆಯ ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಸೊಪ್ಪಡ್ಲ – ಕೊರಿಕೊಪ್ಪ ಗ್ರಾಮಗಳ ನಡುವೆ ಬೆಳಗಾವಿ ಬಾಗಲಕೋಟ ರಸ್ತೆಯ ಮೇಲೆ ಸುಮಾರು 40 – 45 ವಯಸ್ಸಿನ ಅನಾಮಧೇಯ ಮಹಿಳೆಯೊಬ್ಬಳು ಹಿಟ್ ಅಂಡ್ ರನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.
ಮಹಿಳೆಯು ಹಸಿರು ಬಣ್ಣದ ನೈಟಿ, ಕೆಂಪು ಬಣ್ಣದ ಮೇಲು ಸೀರೆ ಧರಿಸಿದ್ದು, ಕೊರಳಲ್ಲಿ ಒಂದು ಎಳೆಯ ತಾಳಿ, ಕಿವಿಯಲ್ಲಿ ಕಿವಿಯೋಲೆ, ಮೂಗಿನ ಎಡ ಹೊಳ್ಳಿಗೆ ಮೂಗು ಬಟ್ಟು, ಕಾಲುಗಳಲ್ಲಿ ಬೆಳ್ಳಿಯ ಕಾಲುಂಗುರ ಧರಿಸಿದ್ದು, ಮೇಲ್ನೋಟಕ್ಕೆ ಭಿಕ್ಷುಕಿಯ ತರ ಕಾಣಿಸುತ್ತಾಳೆ, ಸದರಿ ಅವಳ ಹೆಸರು ವಿಳಾಸ ಮತ್ತು ವಾರಸುದಾರರ ಬಗ್ಗೆ ಗೊತ್ತಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಈ ಕೆಳಕಂಡ ನಂಬರುಗಳಿಗೆ ಸಂಪರ್ಕಿಸಲು ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ ತಿಳಿಸಿದ್ದಾರೆ.