ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಸೂಚನೆಯಿದೆ ಎಂದು ಕನ್ನಡ ಪರ ಹೋರಾಟಗಾರ ಆದ ವಾಟಾಳ್ ನಾಗರಾಜ್ ಅವರು ಚಾಮರಾಜಗರದಲ್ಲಿ ಹೇಳಿದ್ದಾರೆ. ಇನ್ನೂ ಸುದ್ದಿಗಾರರೊಂದಿಗೆ ಮಾತನಾಡಿರುವ ವಾಟಾಳ್ ಅವರು, ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು ದಿನೆ ದಿನೆ ಹೆಚ್ಚಾಗಿದೆ. ಇನ್ನೂ ಈ ಹಿನ್ನಲೆಯಲ್ಲಿ ಕೇರಳದೊಂದಿಗೆ ಗಡಿ ಹೊಂದಿರುವ ಚಾಮರಾಜ ನಗರಕ್ಕೆ ಕೋವಿಡ್ ಆತಂಕವು ಎದುರಾಗಿದೆ. ಜೊತೆಗೆ ಒಂದು ವೇಳೆ ಕೋವಿಡ್ ಹೆಚ್ಚಾದ್ರೆ ರಾಜ್ಯದಲ್ಲಿ ಮತ್ತೆ ರಿ ಲಾಕ್‍ಡೌನ್ ಆಗುವ ಸೂಚನೆಯಿದೆ ಎಂದು ಹೇಳಿದ್ದಾರೆ.
ಇನ್ನೂ ಕೇರಳದಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದೆ, ಇನ್ನೂ ಕೇಂದ್ರ ಸರ್ಕಾರ ಕೋರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇರಳಾಗೆ ನೆರವು ನೀಡಬೇಕು. ಇನ್ನೂ ಚಾಮರಾಜ ನಗರದ ಚೆಕ್ ಪೋಸ್ಟ್ ಅಲ್ಲಿ ಸಮಗ್ರ ಕೋರೊನಾ ಪರೀಕ್ಷೆಯನ್ನು ಮಾಡುವಂತೆ ಎಚ್ಚರಿಸಿದ್ರು. ಜೊತೆಗೆ ಸರ್ಕಾರ ಕೋವಿಡ್ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು. ಜೊತೆಗೆ ರಾಜ್ಯದಲ್ಲಿ ಮತ್ತೆ ಈಗ ಲಾಕ್‍ಡೌನ್ ಆಗುವ ಸೂಚನೆಯಿದೆ. ಜೊತೆಗೆ ಈಗಾಗಲೇ ೧ ವರ್ಷ ಲಾಕ್‍ಡೌನ್ ಆಗಿತ್ತು. ಹಾಗಾಗಿ ಜನರು ಹೇದರಿದ್ರು. ಆದರೆ ಜನರು ಇನ್ನೂ ಅದೆ ನೋವಿನಲಿದ್ದು, ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಸರ್ಕಾರವು ಇತ್ತ ಕಡೆ ಗಮನ ಹರಿಸುವಂತೆ ಎಚ್ಚರಿಸಿದ್ರು.