ಮೈಸೂರು: ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಸರಿಯಾದ ಯೋಜನೆಯೇ ಇಲ್ಲ, ರಾಜ್ಯಕ್ಕೆ ಗೌರವ ಹೇಗೆ ಕೊಡಬೇಕು, ಅಧಿಕಾರ ಹೇಗೆ ನೀಡಬೇಕೆಂಬ ಯೋಜನೆ, ಯೋಚನೆಗಳಾಗಲಿ ಇಲ್ಲ. ಇಂದಿನ ಕಷ್ಟದ ಪರಿಸ್ಥಿತಿಯಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬುದಿಲ್ಲ. ಅದು ಅವರ ಪದ್ಧತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಬಿಜೆಪಿ ಒಂದು ದೊಡ್ಡ ಶಾಪ. ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಜೊತೆ ಬೆಳಗ್ಗೆ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ಅವರಿಗೆ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿತು, ಈ ಸಂದರ್ಭದಲ್ಲಿ ಡಿ ಕೆ ಶಿಗೆ ಜಯವಾಗಲಿ, ಮುಂದಿನ ಮುಖ್ಯಮಂತ್ರಿ ಎಂಬ ಕೂಗು ಸಹ ಕೇಳಿಬಂತು.