ಕೂಗು ನಿಮ್ಮದು ಧ್ವನಿ ನಮ್ಮದು

ಹೆಂಡತಿ ವಿಚ್ಛೇದನ ಕೇಳಿದ್ದಕ್ಕೆ ಬೇಸತ್ತ, ಪತಿ ಬಾವಿಗೆ ಹಾರಿ ಆತ್ಮಹತ್ಯೆ

ತಿಪಟೂರು: ನಿನ್ನ ಜೊತೆಗೆ ನನಗೆ ಇರಲು ಇಷ್ಟ ಇಲ್ಲ ನನಗೆ ನೀನು ಡಿವೊರ್ಸ್ ಕೋಡು ಎಂದು ಪತ್ನಿ ತನ್ನ ಪತಿಗೆ ಕೇಳಿದಕ್ಕೆ ಮನನೊಂದ ಗಂಡ ನಗರ ಸಮೀಪದ ಮಡೇನೂರು ಬೋವಿ ಕಾಲೋನಿಯ ಅಯ್ಯನ ಬಾವಿಗೆ ಬಿದ್ದು ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆಯು ಗುರುವಾರ ನಡೆದಿದೆ. ಇನ್ನೂ ಅರಸೀಕೆರೆ ತಾಲ್ಲೂಕು ನಾರಾಯಣ ಘಟ್ಟಿ ಹಳ್ಳಿಯ ನಿವಾಸಿಯಾದ ಗಂಗಾಧರ ೩೯ ವಯಸ್ಸಿನ ಯುವಕ ಮೃತ ದುರ್ದೈವಿ. ಇನ್ನೂ ಈತನಿಗೆ ೧೭ ವರ್ಷದ ಹಿಂದೆಯೇ ತುರುವೇಕೆರೆ ತಾಲೂಕು ಅರೇಮಲ್ಲೆನಹಳ್ಳಿಯ ನಿವಾಸಿಯಾದ ಅನಿತಾ ಎಂಬ ಹುಡಗಿಯ ಜೊತೆಗೆ ವಿವಾಹವಾಗಿತ್ತು.

ಮುಂದೆ ಇವರಿಬ್ಬರ ನಡುವೆ ಇರುವ ಸಣ್ಣ ಪುಟ್ಟ ಜಗಳಗಳಿಂದ ಅನಿತಾ ಏಳು ವರ್ಷದ ಹಿಂದೆ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿದ್ದಳು. ಮಗನ ಜೊತೆಗೆ ವಾಸಮಾಡುತ್ತಿದ್ದ ಗಂಗಾಧರ, ಹೋಂ ಗಾರ್ಡ್ ಕೆಲಸ ಮಾಡಿಕೊಂಡು ತನ್ನ ಜೀವನವನ್ನು ಸಾಗಿಸುತ್ತಿದ್ದ. ಇದರ ಮಧ್ಯೆ ಪತ್ನಿ ತುರುವೇಕೆರೆ ನ್ಯಾಯಾಲಯದಲ್ಲಿ ಡಿವೊರ್ಸ್ಕ್ ಕೇಳಿ ಅರ್ಜಿ ಸಲ್ಲಿಸಿದ ಕೇಸ್ ಒಂದು ಹಂತದಲ್ಲಿತ್ತು. ಆಗ ಗಂಗಾಧರ ನನ್ನ ಹೆಂಡತಿ ಎಲ್ಲಿ ನನ್ನಿಂದ ಕಂಪ್ಲೀಟ್ ದೂರ ಹೋಗುತ್ತಾಳೋ ಎಂದು ಮನನೊಂದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.

error: Content is protected !!