ಕೂಗು ನಿಮ್ಮದು ಧ್ವನಿ ನಮ್ಮದು

ಯಡಿಯೂರಪ್ಪನವರ ಮಾತನ್ನೇ BJP ಹೈಕಮಾಂಡ್ ಕೇಳಲಿಲ್ಲ, ಇನ್ನೂ ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? ಸಿದ್ದರಾಮಯ್ಯ ಟೀಕೆ

ಮೈಸೂರು: BJP ಮೂಲದ ಬಿ.ಎಸ್‍.ಯಡಿಯೂರಪ್ಪನವರ ಮಾತನ್ನೇ BJP ಹೈಕಮಾಂಡ್ ಕೇಳಲಿಲ್ಲ, ಇನ್ನೂ ಜನತಾದಳ ಮೂಲದ ಬಸವರಾಜ್ ಬೊಮ್ಮಾಯಿಯವರ ಮಾತು ಕೇಳುತ್ತಾರ ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಇನ್ನೂ ಸರ್ಕಾರದ ಒಬ್ಬ ವ್ಯಕ್ತಿಯಿಂದ ಕೋವಿಡ್ ನಿಯಂತ್ರಣವು ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು. ಜೊತೆಗೆ ಕೇರಳ, ಮಹಾರಾಷ್ಟ್ರದಿಂದ ಬರುತ್ತಿರುವ ವ್ಯಕ್ತಿಗಳನ್ನು ತಡೆಯಬೇಕು. ಇನ್ನೂ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿವೆ. ಜೊತೆಗೆ ಸರ್ಕಾರವು ಇದರ ಬಗ್ಗೆ ಈ ಕೂಡಲೇ ಎಚ್ಚರ ವಹಿಸಬೇಕು. ಇನ್ನೂ ಕಳೆದ ಬಾರಿಯ ನೆರೆ ಪರಿಹಾರವನ್ನೆ ಸರ್ಕಾರ ಇನ್ನು ನೀಡಿಲ್ಲ, ಮತ್ತು ಮನೆ ಬಿದ್ದವರಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ದನವು ಸಹ ಇನ್ನೂ ಬಂದಿಲ್ಲ.

ಜೊತೆಗೆ ಕೇಂದ್ರದ ಬಳಿ ರಾಜ್ಯದ ಪಾಲು ಪಡೆಯುವುದಕ್ಕೆ, ಯಡಿಯೂರಪ್ಪನವರಿಗೆ ಆಗಲಿಲ್ಲ. ಇನ್ನೂ ಬೊಮ್ಮಾಯಿ ಅವರುಗೆ ಆಗುತ್ತಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ. ಇನ್ನೂ
ಬಿಜೆಪಿಯಲ್ಲೇ ಬೆಳೆದಿರುವ ಬಿ.ಎಸ್ ಯಡಿಯೂರಪ್ಪನವರಿಗೆ ಕೇಂದ್ರದಿಂದ ಅನುದಾನವನ್ನು ತರಲು ಸಾಧ್ಯವಾಗಲಿಲ್ಲ. ಜೊತೆಗೆ ಜನತಾದಳದಿಂದ ಹೋಗಿರುವ ಬೊಮ್ಮಾಯಿ ಅವರಿಗೆ ಆಗುತ್ತಾ? ಎಂದು ಸಿದ್ದರಾಮಯ್ಯನವರು ಟೀಕೆ ಮಾಡಿದ್ದಾರೆ. ಇನ್ನೂ ಜನತಾದಳದಿಂದ ಹೋದವರ ಮಾತುಗಳನ್ನು BJP ಅವರು ಕೇಳ್ತಾರಾ? ಎಂದು ಪ್ರಶ್ನಿಸಿದ್ರು. ಇದರ ಜೊತೆ ಸಚಿವ ಸಂಪುಟ ಆಗಬೇಕಿತ್ತು. ನಿನ್ನೆ ಮುಖ್ಯಮಂತ್ರಿ ಈ ವಿಷಯದ ಕುರಿತು ಚರ್ಚೆ ಮಾಡಿಲ್ಲ. ಇನ್ನೂ ಮುಂದಿನ ಬಾರಿ ಮಾಡಬಹುದು. ಇನ್ನೂ ಕೋವಿಡ್ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರಿಗಣಿಸಬೇಕು ಎಂದ್ದಿದಾರೆ.

error: Content is protected !!