ಕೂಗು ನಿಮ್ಮದು ಧ್ವನಿ ನಮ್ಮದು

ಆರೋಗ್ಯಕರವಾದ ರಾಗಿ ಇಡ್ಲಿ ತಿನ್ನುವುದರಿಂದ ಏನೆಲ್ಲಾ ಲಾಭ ಗೋತ್ತಾ? ಈ ಸ್ಟೋರಿ ಓದಿ

ಪೋಷಕಾಂಶಗಳನ್ನು ಹೊಂದಿರುವ ರಾಗಿ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಇನ್ನೂ ರಾಗಿ ದಕ್ಷಿಣ ಭಾರತ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಆಹಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಜೊತೆಗೆ ರಾಗಿಯಿಂದ ತಯಾರಿಸುವ ಆಹಾರಗಳು ಆರೋಗ್ಯಕರವಾಗಿ ಮತ್ತು ರುಚಿಯಾಗಿರುತ್ತದೆ. ಇನ್ನೂ ಅಧಿಕ ಮಟ್ಟದ ನಾರಿನಾಂಶ,ಆಂಟಿ ಆಕ್ಸಿಡೆಂಟುಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇದರಲ್ಲಿದೆ. ಇನ್ನೂ ನಿಯಮಿತವಾಗಿ ರಾಗಿಯನ್ನು ಸೇವಿಸುತ್ತಾ ಬಂದರೆ ಮೂಳೆಗಳು ಬಲಿಷ್ಠತೆ, ಮಧುಮೇಹದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ನೂ ಹಸಿವನ್ನು ಮುಂದೂಡುವುದು ಮತ್ತು ಜೀರ್ಣಕ್ರಿಯೆಯನ್ನು ಕೂಡ ಉತ್ತಮವಾಗಿರುಸುತ್ತದೆ. ಜೊತೆಗೆ ರಾಗಿಯಿಂದ ನೀವು ಆಗಾಗ ದೋಸೆ ಮಾಡಿ ತಿಂದಿರುತ್ತೀರ ಆದ್ರೆ ಇವತ್ತು ರಾಗಿಯಿಂದ ಇಡ್ಲಿ ಮಾಡಿ ನೋಡಿ ಹೇಗಿರುತ್ತೆ ಅಂತಾ, ರಾಗಿ ಇಡ್ಲಿ ಮಾಡಲು ಬೇಕಾಗಿರುವವ ಸಾಮಗ್ರಿಗಳು

ಬಾಂಬೆ ರವೆ ೨ ಕಪ್, ರಾಗಿ ಹಿಟ್ಟು ೨ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಮೊಸರು ೨ ಕಪ್, ಅಡುಗೆ ಸೋಡಾ ಕಾಲು ಚಮಚ, ನೀರು, ಇನ್ನೂ ರಾಗಿ ಮುದ್ದೆಯನ್ನು ಮಾಡುವ ವಿಧಾನ ಮೊದಲು ರವೆಯನ್ನು ಮಧ್ಯಮ ಉರಿಯಲ್ಲಿ ಎರಡರಿಂದ ಮೂರು ನಿಮಿಷಗಳ ಕಾಲ ಹುರಿಯಿರಿ. ನಂತರ ಈ ಹುರಿದ ರವೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿ ಅದರಲ್ಲಿ ಉಪ್ಪು ಮತ್ತು ಮೊಸರನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ನಂತರ ಅದನ್ನು ಸ್ವಲ್ಪ ಸಮಯದ ವರೆಗೆ ನೆನೆಯಲು ಬಿಡಬೇಕು. ಆಮೇಲೆ ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಅದು ನೋರೆ ಬರುವ ವರೆಗೂ ಅದನ್ನು ಕಲಿಸಬೇಕು. ನಂತರ ಇಡ್ಲಿ ತಟ್ಟೆಗಳನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ ನಂತರ ಅದಕ್ಕೆ ಕೊಬ್ಬರಿ ಚಟ್ನಿ ಜೊತೆ ತಿಂದ್ರೆ ಎಂತಾ ರುಚಿ ನೀವು ಓಮ್ಮೆ ಟ್ರಾಯ್ ಮಾಡಿ ನೋಡಿ.

error: Content is protected !!