ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಎಂದೇ ಹೆಸರು ವಾಸಿಯಾಗಿರುವ M.S.ಧೋನಿಯವರು ಅವಾಗ್ ಅವಾಗಾ ಹೇರ್ ಸ್ಟೈಲ್ಗಳನ್ನು ಚೆಂಜ್ ಮಾಡುತ್ತಾ ಇರುತ್ತಾರೆ. ಇನ್ನೂ ಈ ಹಿಂದೆಯೇ ಉದ್ದ ಕೂದಲು ಬಿಟ್ಟು ಹೊಸ ಟ್ರೆಂಡ್ನ್ನು ಸೃಷ್ಟಿಸಿದ್ರು. ಆದ್ರೆ ಇದೀಗ ಸಡನ್ ಆಗಿ ಡ್ಯಾಶಿಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಎಮ್.ಎಸ್. ಸೋಷಿಯಲ್ ಮಿಡಿಯಾದಲ್ಲಿ ಅಷ್ಟೇನು ಆಕ್ಟಿವ್ ಇಲ್ಲಾ. ಆದ್ರೆ ಇದೀಗಾ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ M.S.ಧೋನಿಯವರ ಈ ಡ್ಯಾಶಿಂಗ್ ಲುಕ್ನ್ನು ಹಂಚಿಕೊಂಡಿದ್ದಾರೆ.
ಇನ್ನೂ ಈ ಹೊಸ ಲುಕ್ನ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಧೋನಿಯವರ ಈ ನ್ಯೂವ್ ಹೇರ್ ಸ್ಟೈಲ್ ಕಂಡು ಅವರ ಪ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಇನ್ನೂ ಈ ಹೊಸ ಕೇಶ ವಿನ್ಯಾಸಕ್ಕೆ The Uber Cool Fox-Hawk Cut ಎಂದು ಹೆಸರಿಡಲಾಗಿದೆ. ಇನ್ನೂ M.S.ಧೋನಿಯವರು ಹೊಸ ಫಂಕಿ ಹೇರ್ ಸ್ಟೈಲ್ ಹಾಗೂ ಗಡ್ಡದ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇನ್ನೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಹ ಆಲಿಮ್ ಹಕೀಮ್ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.
ಜೊತೆಗೆ ಫೋಟೋ ನೋಡಿ ಫುಲ್ ಫಿದಾ ಆಗಿರುವ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ಎಸ್. ಧೋನಿಯವರು ೨೫ರ ಯುವಕನಂತೆ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ೨೦೨೦ರ ಆಗಸ್ಟ್ನಲ್ಲಿ ಧೋನಿಯವರ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಧೋನಿ ಇನ್ನೂ ಇದೀಗ IPL ನ ೧೪ನೇ ಆವೃತ್ತಿಗೆ ಸಿದ್ಧವಾಗುತ್ತಿದ್ದು, U.A.E ನಲ್ಲಿ ಪಂದ್ಯಗಳು ನಡೆಯಲಿವೆ.