ಸರ್ಕಾರವು ಒಂದು ವೇಳೆ ಶಾಲೆಗಳನ್ನು ರಿ ಓಪನ್ ಮಾಡದೆ ಇದ್ದರೆ ಕಳೆದ ವರ್ಷದ ಮಾರ್ಗಸೂಚಿಯನ್ನು ಅನುಸರಿಸಿ ನಾವೇ ತರಗತಿಯನ್ನು ರಿ ಓಪನ್ ಮಾಡುತ್ತವೆ ಎಂದಿದ್ದಾರೆ. ಈಗ ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿರುವ ಬಸವರಾಜ ಬೊಮ್ಮಾಯಿಯವರಿಗೆ ಶಾಲೆ ಆರಂಭಕ್ಕೆ ಡೆಡ್ ಲೈನ್ ನೀಡಿವೆ. ಇನ್ನೂ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಕಾರಣಕ್ಕೆ ಶಾಲಾ ಕಾಲೇಜುಗಳು ಬಂದ್ ಆಗಿ ವರ್ಷಗಳೇ ಆಯ್ತು. ಆದ್ರೆ ಶಾಲೆಗಳು ಮಾತ್ರ ರಿ ಓಪನ್ ಆಗೋ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.
ಇದರ ನಡುವೆ ಕೊರೊನಾ ಸಂಖ್ಯೆಯ ಇಳಿಕೆಯ ಪ್ರಮಾಣವು ಕಾಣುತ್ತಿದ್ದು ಶಾಲೆಗಳನ್ನು ಮತ್ತೆ ರಿ ಓಪನ್ ಮಾಡಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಆದ್ರೆ ಶಿಕ್ಷಣ ಇಲಾಖೆಯು ಮಾತ್ರ ಈ ಬಗ್ಗೆ ಕ್ಯಾರೆ ಅಂತಿಲ್ಲ. ಹಾಗಾಗಿ ಇದೀಗ ಬಂದಿರುವ ನೂತನ ಮುಖ್ಯಮಂತ್ರಿ ವಿರುದ್ದ ಖಾಸಗಿ ಶಾಲೆಗಳು ಸಿಡಿದೆದ್ದಿದ್ದು ಮುಖ್ಯಮಂತ್ರಿಗೆ ಶಾಲಾರಂಭಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಿದ್ದಾರೆ. ಇನ್ನೂ ಕಣ್ಣಿಗೆ ಕಾಣದ ವೈರಸ್ ಹೆಮ್ಮಾರಿಯಿಂದಾಗಿ ಮನುಕುಲವೇ ಸಂಕಷ್ಟಕ್ಕೆ ಸಿಲುಕಿದೆ.
ಇನ್ನೂ ಕಳೆದ ಒಂದೂವರೆ ವರ್ಷದಿಂದ ಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬರೆಯುವುದನ್ನು ಮರೆತ್ತಿದ್ದಾರೆ. ಇನ್ನೂ ಸದ್ಯ ಕೋವಿಡ್ ೨ನೇ ಅಲೆಯ ಪ್ರಮಾಣವು ಇಳಿಕೆಯಾಗುತ್ತಿದ್ದು, ಶಾಲೆಗಳನ್ನು ಮತ್ತೆ ರಿ ಓಪನ್ ಮಾಡಬಹುದು ಎಂದು ತಜ್ಞರು ವರದಿ ಕೋಟ್ಟಿದ್ದಾರೆ ಜೊತೆಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆ ಆಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಇದರಿಂದ ಬೇಸುತ್ತಿರುವ ಖಾಸಗಿ ಶಾಲೆಗಳು, ಸರ್ಕಾರ ಒಂದು ವೇಳೆ ಶಾಲೆಗಳನ್ನು ರಿ ಓಪನ್ ಮಾಡದೆ ಇದ್ದರೆ ನಾವೇ ಕಳೆದ ವರ್ಷದ ಮಾರ್ಗಸೂಚಿಯನ್ನು ಅನುಸರಿಸಿ ತರಗತಿಯನ್ನು ರಿ ಓಪನ್ ಮಾಡುತ್ತವೆ ಎಂದಿದ್ದಾರೆ.
ಇನ್ನೂ ಈಗ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿರುವ ಬಸವರಾಜ ಬೊಮ್ಮಾಯಿಗೆ ಶಾಲೆ ಆರಂಭಕ್ಕೆ ಡೆಡ್ ಲೈನ್ ನೀಡಿವೆ. ಇನ್ನು ಈ ಬಗ್ಗೆ ಸಿಎಂಗೆ ಭೇಟಿ ಮಾಡಿ ಶಾಲೆ ಆರಂಭಿಸುವಂತೆ ಖಾಸಗಿ ಶಾಲೆಗಳ ಸಂಘಟನೆ ಮನವಿ ಮಾಡಿದೆ. ಇನ್ನೂ ಆಗಸ್ಟ್ ೧ ರಿಂದ ಶಾಲೆ ಆರಂಭಕ್ಕೆ ಸರ್ಕಾರ ಅನುಮತಿಯನ್ನು ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇನ್ನೂ ಈ ಸರ್ಕಾರ ಶಾಲೆಗಳನ್ನ ಜುಲೈ ೩೧ ರೊಳಗೆ ರಿ ಓಪನ್ ಮಾಡಲು ಆದೇಶ ಹೊರಡಿಸದೇ ಹೋದರೆ, ರೂಪ್ಸಾ ಸಂಘಟನೆ ರಾಜ್ಯದಲ್ಲಿ ಅಗಸ್ಟ್ ೨ರಿಂದ ಪಾಳಿ ಪದ್ದತಿಯಲ್ಲಿ ಕಳೆದ ವರ್ಷದ ಗೈಡ್ ನೊಂದಿಗೆ ಶಾಲೆ ಆರಂಭ ಮಾಡೊದಾಗಿ ಎಚ್ಚರಿಕೆಯನ್ನು ನೀಡಿದೆ.
ಇನ್ನೂ ಮಕ್ಕಳ ಹಿತದೃಷ್ಟಿಯಿಂದ ಶಾಲೆ ಆರಂಭ ಮಾಡುವುದೆ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಸರ್ಕಾರವು ಈ ಕೂಡಲೇ ಶಾಲೆಗಳ ಆರಂಭಕ್ಕೆ ಅನುಮತಿಯನ್ನು ನೀಡಬೇಕು, ಇಲ್ಲವಾದ್ರೆ ಮಕ್ಕಳು ಬಾಲ ಕಾರ್ಮಿಕರು, ಅನಕ್ಷರಸ್ಥರು, ಜೊತೆಗೆ ಬಾಲ್ಯವಿವಾಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಶಾಲೆಗಳನ್ನು ಆದಷ್ಟು ಬೇಗನ ರಿ ಓಪನ್ ಮಾಡಬೇಕೆಂದು ಖಾಸಗಿ ಶಾಲೆಗಳು ನೂತನ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.