ರಾಯಚೂರು: ಮನೆ ಮಾರಾಟದ ವಿಚಾರವಾಗಿ ಅಪ್ಪ-ಮಗನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ಭೀಮಪ್ಪ (18) ಕೊಲೆಯಾದ ದುರ್ವೈವಿಯಾಗಿದ್ದಾನೆ. ಹಣಮಂತಪ್ಪ (65) ಸ್ವಂತ ಮಗನನ್ನೇ ಕೊಲೆಗೈದ ಪಾಪಿ ತಂದೆಯಾಗಿದ್ದಾನೆ.
ಎರಡು ಮದುವೆ ಆಗಿದ್ದ ಆರೋಪಿ ಹಣಮಂತಪ್ಪ ವಿವಿಧೆಡೆ ಸಾಲ ಮಾಡಿಕೊಂಡಿದ್ದನು. ಹೀಗಾಗಿ ಹಣಮಂತಪ್ಪ ಮನೆ ಮಾರಾಟ ಮಾಡಲು ಮುಂದಾಗಿದ್ದನು. ಇದಕ್ಕೆ ಮಗ ಭೀಮಪ್ಪ ತಕರಾರು ತಗೆಗಿದ್ದ ಎಂದು ಹೇಳಲಾಗುತ್ತಿದೆ.
ಇದೇ ಸಿಟ್ಟಿನಿಂದ ಈಜು ಬಾರದ ಮಗನನ್ನ ಕಾಲುವೆಗೆ ನೂಕಿ ಕೊಲೆಗೈದಿದ್ದಾನೆ ಅಪ್ಪ. ಮಗನಿಗೆ ನಂಬಿಸಿ ಮುಖ್ಯ ಕಾಲುವೆಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸಿ ಆರೋಪಿ ಹಣಮಂತಪ್ಪನನ್ನ ಬಂಧಿಸಿದ್ದಾರೆ. ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.