ಕೂಗು ನಿಮ್ಮದು ಧ್ವನಿ ನಮ್ಮದು

ಸಚಿವ ಸ್ಥಾನಕ್ಕಾಗಿ ನಾನು ಎಲ್ಲಿಯೂ ಹೋಗಲ್ಲ: ಅಪ್ಪಚ್ಚು ರಂಜನ್

ಮಡಿಕೇರಿ: ಸಚಿವ ಸ್ಥಾನಕ್ಕಾಗಿ ನಾನು ಎಲ್ಲಿಯೂ ಹೋಗುವುದಿಲ್ಲ, ಹೈಕಮಾಂಡ್ನ ಮೇಲೆ ನನಗೆ ವಿಶ್ವಾಸವಿದೆ. ಇನ್ನೂ ಕೇಂದ್ರದ ನಾಯಕರು ಜಿಲ್ಲಾವಾರು ಸಾಮಾಜಿಕ ನ್ಯಾಯವನ್ನು ಈ ಬಾರಿಯೂ ಒದಗಿಸಲಿದ್ದಾರೆ. ಈ ಕುರಿತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸವನ್ನು ವ್ಯಕ್ತಪಡಿಸಿದ್ರು. ಇನ್ನೂ ಸಚಿವ ಸ್ಥಾನಕ್ಕಾಗಿ ರಾಜ್ಯದ ಕೆಲವು ನಾಯಕರು ಲಾಬಿ ನಡೆಸುತ್ತಿದ್ದಾರೆ. ಮತ್ತು ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಜಿಲ್ಲಾ ಕೇಂದ್ರದಲ್ಲಿಯೇ ಇದ್ದಾರೆ. ಸದ್ಯ ಮಡಿಕೇರಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾದ್ಯಮದವರೊಂದಿಗೆ ಮಾತಾನಾಡಿದ ಅಪ್ಪಚ್ಚು ರಂಜನ್ ಅವರು, ಕೇಂದ್ರ ನಾಯಕರ ಮೂಲ ಬಿಜೆಪಿಗರನ್ನು ಈ ಬಾರಿಯೂ ಗುರುತಿಸಲಿದ್ದಾರಂತೆ. ಇನ್ನೂ ಜಿಲ್ಲೆಯಲ್ಲಿ ಪ್ರವಾಹದ ಆತಂಕ ವಿದೆ.

ಜೊತೆಗೆ ಕೋರೊನಾ ಸೋಂಕು ಹೆಚ್ಚುತ್ತಿದೆ. ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸಬೇಕಾಗಿದೆ. ಇನ್ನೂ ಮೊದಲು ಜನಪ್ರತಿನಿಧಿಗಳಾಗಿ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನೂ ಹೀಗಾಗಿ ನಾನು ಜಿಲ್ಲೆಯಲ್ಲೇ ಇದ್ದೇನೆ ಎಂದು ಹೇಳಿದ್ರು. ಈ ಹಿಂದೆ ಯುವಜನರ ಮತ್ತು ಕ್ರೀಡಾ ಸಚಿವನಾಗಿದ್ದಾಗ ನಾನು ಸಹ ಸಾಕಷ್ಟು ಕೆಲಸವನ್ನು ಮಾಡಿದ್ದೇನೆ. ಜೊತೆಗೆ ಕ್ರೀಡಾ ಇಲಾಖೆಗೆ ೪೯ ಕೋಟಿ ರೂಪಾಯಿ. ಆಸ್ತಿ ಉಳಿಸುವ ಕೆಲಸವನ್ನು ಮಾಡಿದ್ದೇನೆ. ಜೊತೆಗೆ ರಾಜ್ಯಕ್ಕೆ ೧ ಕ್ರೀಡಾ ನೀತಿ ಬೇಕಾಗಿದೆ. ಹಾಗೆಯೇ ಕ್ರೀಡಾ ವಿಶ್ವವಿದ್ಯಾನಿಲಯವು ಸಹ ಬೇಕಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ರು.

error: Content is protected !!