ಕೂಗು ನಿಮ್ಮದು ಧ್ವನಿ ನಮ್ಮದು

ಗ್ರಾಮ ಸಹಾಯಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ

ಮಂಗಳೂರು: ಅಂಬ್ಲಮೊಗರು ಗ್ರಾಮದ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಂಬ್ಲಮೊಗರುವಿನ ಪಡ್ಯಾರಮನೆ ಗುತ್ತಿನ ನಿತಿನ್ ಶೆಟ್ಟಿ (34) ಮೃತ ದುರ್ದೈವಿ.

ಮದಕದಲ್ಲಿರುವ ತನ್ನ ನಿವಾಸದ ಬೆಡ್‌ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಲವು ವರ್ಷದಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಿತಿನ್ ಅವರು ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು, ಗುರುವಾರ ಬೆಳಿಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಗೆ ವಾಪಸಾದ ನಿತಿನ್ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ 9.30 ವರೆಗೂ ಕೋಣೆಯಿಂದ ಹೊರಗೆ ಬರದೇ ಇದ್ದಾಗ ಅನುಮಾನಗೊಂಡ ಅವರ ತಾಯಿ ಹೋಗಿ ನೋಡಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!