ಕೂಗು ನಿಮ್ಮದು ಧ್ವನಿ ನಮ್ಮದು

ಹೈ ಕಮಾಂಡ್ ಭೇಟಿಗೆ ಮುಂದಾದ ಆರ್ ಅಶೋಕ್! ಡಿಸಿಎಂ ಪಟ್ಟ ಸಾಧ್ಯತೆ?

ಬೆಂಗಳೂರು: ಈ ಹಿಂದೆ ಇದ್ದಂತೆ ಮೂವರು ಡಿಸಿಎಂ ಗಳನ್ನು ನೇಮಿಸ ಬಹುದು. ಆದರೆ, ಈ ಬಾರಿ ಹೊಸಬರಿಗೆ ಈ ಡಿಸಿಎಂ ಪಟ್ಟ ಸಿಗಲಿದೆ ಎನ್ನಲಾಗಿದೆ. ಇದರಲ್ಲಿ ಒಂದು ಸ್ಥಾನ ಆರ್ ಅಶೋಕ್ಗೆ ಸಿಗಲಿದೆ ಎಂಬ ಮಾತು ದಟ್ಟವಾಗಿದೆ. ಇದೇ ಹಿನ್ನಲೆ ಇಂದು ಅಶೋಕ್ ದೆಹಲಿ ಪ್ರಯಾಣ ನಡೆಸಿದ್ದು, ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಮೊದಲ ಡಿಸಿಎಂ ಆಗಿ ಗೋವಿಂದ ಕಾರಜೋಳ, ಎರಡನೇ ಡಿಸಿಎಂ ಆಗಿ ಅಶ್ವಥ್ ನಾರಾಯಣ್, ಮೂರನೇ ಡಿಸಿಎಂ ಆಗಿ ಲಕ್ಷ್ಮಣ ಸವದಿ ಇದ್ದರು. ಈಗ ಇವರಲ್ಲಿ ಇಬ್ಬರು ಅಂದರೆ ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ತೆಗೆದು, ಆ ಜಾಗಕ್ಕೆ ಹಿರಿಯ ನಾಯಕರಾದ ಅಶೋಕ್ ಹಾಗೂ ಶ್ರೀರಾಮುಲುರನ್ನು ನೇಮಕ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಒಕ್ಕಲಿಗರ ಕೋಟಾದಡಿ ಆರ್ ಅಶೋಕ್ ಹಾಗೂ ವಾಲ್ಮೀಕಿ ಕೋಟಾದಡಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗುತ್ತೆ ಎನ್ನಲಾಗಿದೆ. ಕಳೆದ ಬಾರಿಯೇ ಶ್ರೀ ರಾಮುಲು ಡಿಸಿಎಂ ಪಟ್ಟಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರ ಅಭಿಮಾನಿಗಳು ಕೂಡ ಈ ಕುರಿತು ಅಭಿಯಾನ ನಡೆಸಿದ್ದರು. ಕಳೆದ ಬಾರಿ ಸ್ಥಾನ ಕೈ ತಪ್ಪಿದ ಹಿನ್ನಲೆ ಹೈ ಕಮಾಂಡ್ ನೀಡಿದ ಅಭಯದ ಬಳಿಕ ಈ ಬಾರಿ ಅವರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನೂ ಉಳಿದಿರುವ ಗೋವಿಂದ ಕಾರಜೋಳ ರನ್ನು ಎಂದಿನಂತೆ ಡಿಸಿಎಂ ಸ್ಥಾನದಲ್ಲಿ ಮುಂದುವರೆಸಲು ಹೈಕಮಾಂಡ್ ಆಲೋಚಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಅಶೋಕ್ಗೆ ಡಿಸಿಎಂ ಸ್ಥಾನದ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಹಿನ್ನಲೆ ಬೆಂಗಳೂರಿನ ಶಾಸಕರಾಗಿರುವ ಅಶೋಕ್ಗೆ ಈ ಸಚಿವ ಸ್ಥಾನ ನೀಡುವುದು ಸೂಕ್ತ ಎಂಬ ಲೆಕ್ಕಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!