ಬೆಳಗಾವಿ: ತಾಲೂಕಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಚಿಕ್ಕೋಡಿ ಹಾಗೂ ಅಂತರ ಇಲಾಖಾ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯು ಮಾಸಾಚರಣೆಯನ್ನು ತಾಲೂಕಾ ಆರೋಗ್ಯ ಅಧಿಕಾರಿ ಡಾ.ವ್ಹಿ ವ್ಹಿ.ಶಿಂಧೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಡೆಂಗ್ಯು ರೋಗ ತಡೆಗಟ್ಟುವಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ನಗರಾಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರೆಲ್ಲರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು. ಈ ವೇಳೆ ಜಿಲ್ಲಾ ಆರೋಗ್ಯ ನಿರೀಕ್ಷಕರಾದ ವ್ಹಿ ಆರ್ ಕುಂಬಾರ, ಬಿ ವಾಯ್ ನಾಯ್ಕರ, ಕೆ ಆರ್ ಕಾಂಬಳೆ, ಎಸ್ ವಾಯ್ ದಿವಟಿ, ಡಾ ಆರ್ ಎಸ್ ಮದಿಹಳ್ಳಿ, ಡಾ ಶಾಸ್ತ್ರಿ ಎಲ್ಎಚ್, ವ್ಹಿಎನ್ ಬಿ ಬಡಿಗೇರ, ಚಿದಾನಂದ ಕಲಾದಗಿಮಠ, ರಾಜು ದತ್ತವಾಡೆ, ಸಿದ್ದೇಶ್ವರ ಬ್ಯಾಕುಡ, ಶೋಭಾ ಹಿರೇಮಠ ಸೇರಿದಂತೆ ಅಂತರ ಇಲಾಖೆಯ ಅಧಿಕಾರಿಗಳು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.