ಕೂಗು ನಿಮ್ಮದು ಧ್ವನಿ ನಮ್ಮದು

ಬೊಮ್ಮಾಯಿ ಆಯ್ಕೆಗೆ ಕಾರಣಗಳೇನು?

ಬೆಂಗಳೂರು: ಮುಖ್ಯಮಂತ್ರಿ ರೇಸ್‍ನಲ್ಲಿ ಇವತ್ತು ದಿಢೀರ್ ಅಂತಾ ಬಸವರಾಜ ಬೊಮ್ಮಾಯಿಯವರ ಹೆಸರು ಸೇರ್ಪಡೆ ಆಯಿತು. ಜೊತೆಗೆ ಅರವಿಂದ್ ಬೆಲ್ಲದ್, ಕೇಂದ್ರದ ಮಂತ್ರಿ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ, ಕಾಗೇರಿ ಸೇರಿ ಕೆಲವರ ಹೆಸರು ಮುಖ್ಯಮಂತ್ರಿ ರೇಸ್‍ನಲ್ಲಿ ಕೇಳಿ ಬಂದಿತ್ತು. ಇನ್ನೂ ಅಂತಿಮವಾಗಿ ಬೆಲ್ಲದ್,ಬೊಮ್ಮಾಯಿ ಹೆಸರು ಫೈನಲ್ ರೇಸ್‍ನಲ್ಲಿ ಇತ್ತು. ಕೊನೆಯಲ್ಲಿ ಅರವಿಂದ್ ಬೆಲ್ಲದ್ ಮೆಟ್ಟಿನಿಂತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇನ್ನೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಯ್ಕೆಗೆ ಕಾರಣಗಳು ಎನ್ ಎನು ಈ ಕೇಳಗಿನಂತಿವೆ.

ರಾಜಕೀಯ ಅನುಭವದಲ್ಲಿ ಚಾಣಾಕ್ಷತನ, ಮೃದು ಸ್ವಭಾವ, BJP ಸೇರಿದ ಮೇಲೆ ತೋರಿದ ಪಕ್ಷ ನಿಷ್ಠೆ ಮತ್ತು ಬಿ.ಎಸ್ ಯಡಿಯೂರಪ್ಪನವರು KGP ಕಟ್ಟಿದಾಗಲೂ BJP ಯಲ್ಲಿ ಉಳಿದಿರುವುದು, ಬಿಎಸ್ವೈಯವರ ಆಪ್ತಮಿತ್ರ , ಜೊತೆಗೆ ಲಿಂಗಾಯತ ಮುಖಂಡ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.

ಇನ್ನೂ ಇ ಮೆಕ್ಯಾನಿಕಲ್ ಪದವೀಧರ ಆಗಿರುವ ಬೊಮ್ಮಾಯಿಯವರು ಯುವ ಜನತಾದಳದಿಂದ ರಾಜಕೀಯ ಜೀವನವನ್ನು ಪ್ರಾರಂಭ ಮಾಡಿದ್ರು. ಜೊತೆಗೆ ೧೯೯೬ ರಲ್ಲಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ರು. ನಂತರ ೧೯೯೭, ೨೦೦೩ ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಆದ್ರು. ಇನ್ನೂ ೨೦೦೮ ರಲ್ಲಿ BJP ಗೆ ಸೇರ್ಪಡೆಯಾಗಿ, ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದ್ರು. ಜೊತೆಗೆ ಬಿಎಸ್ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಸಚಿವರಾದ್ರು.

error: Content is protected !!