ಚಾಮರಾಜನಗರ: ನಾಗಮಣಿ ಕೊಡುವ ನೆಪದಲ್ಲಿ ನಕಲಿ ನಾಗಮಣಿ ನೀಡಿ ಬೆಂಗಳೂರು ನಿವಾಸಿಯೊಬ್ಬರಿಗೆ ವಂಚನೆ ಮಾಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರದಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ ಮನೇಶ್ ರವಿಗೆ ಕೆಲ ತಿಂಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕು ಸರಗೂರು ಗ್ರಾಮದ ನಿವಾಸಿ ರಾಜು ಅಲಿಯಾಸ್ ಪುಟ್ಟಸ್ವಾಮಿ ಆರಾಧ್ಯ, ಪರಿಚಯಮಾಡಿಕೊಂಡು ನಾಗಮಣಿ (ಅದೃಷ್ಟದ ಹರಳು) ಕೊಡುವುದಾಗಿ ನಂಬಿಸಿ ಅದಕ್ಕೆ 30 ಲಕ್ಷ ಹಣಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದರು.
ಯರಂಬಾಡಿ ಗ್ರಾಮದ ಸಣ್ಣಪ್ಪಗೌಡ ಕೂಡಲೂರು ಗ್ರಾಮದ ತಂಗವೇಲು ಜೊತೆಯಲ್ಲಿ ಸೇರಿಸಿಕೊಂಡು ಜುಲೈ 17 ರಂದು ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಕೌದಳ್ಳಿ ಗ್ರಾಮದ ಬಳಿ ಎಂ.ಜಿ.ದೊಡ್ಡಿ ಬಸ್ ನಿಲ್ದಾಣದ ಹತ್ತಿರಒಂದು ಸ್ಕಾರ್ಪಿಯೋಕಾರೂತೆಗೆದುಕೊಂಡು ಹೋಗಿ ಮನೇಶ್ರವರನ್ನುಅಲ್ಲಿಗೆ ಬರಮಾಡಿಕೊಂಡು ಅವರಿಗೆ ಒಂದು ಸಣ್ಣ ಮರದ ಬಾಕ್ಸ್ ನಲ್ಲಿ ಹತ್ತಿ ತುಂಬಿ ಅದರಳೊಗೆ ಎಲೆಕ್ಟಿçಕಲ್ ಚಾರ್ಜರ್ ಅಳವಡಿಸಿಕೊಂಡು ಹತ್ತಿಯ ಮೇಲೆ ಒಂದು ಸಣ್ಣ ಹೊಳೆಯುವ ಹರಳನ್ನು ಇಟ್ಟು ಮನೇಶ್ರವರಿಗೆ ತೋರಿಸಿ ಇದೇ ನಾಗಮಣಿ (ಅದೃಷ್ಟದ ಹರಳು) ಎಂದುಅವರನ್ನು ನಂಬಿಸಿ ಮೂರುಜನ ಸೇರಿಕೊಂಡು ಅವರಿಂದ ಮೂವತ್ತು ಲಕ್ಷ ನಗದು ಹಣ ಪಡೆದುಕೊಂಡು ಹೋದರು.
ಇದಾದ ಬಳಿಕ ಮನೇಶ್ರವರಿಗೆ ತಾವು ಮೋಸ ಹೋಗಿರುವ ವಿಚಾರ ಗೊತ್ತಾಗಿ ಜುಲೈ 26 ರಂದು ರಾಮಾಪುರ ಪೊಲೀಸ್ಠಾಣೆಗೆ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಿ ಕಾಣೂನು ಕ್ರಮಕ್ಕೆ ಮನವಿ ಮಾಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಕೆ.ಎಸ್. ಸುಂದರ್ರಾಜ್ರವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪವಿಭಾಗ ಪೊಲಿಸ್ ಉಪಾದೀಕ್ಷಕ ನಾಗರಾಜು ಜಿ. ನೇತೃತ್ವದಲ್ಲಿರಾಮಾಪುರ ಪೊಲೀಸ್ಠಾಣೆಯಆರಕ್ಷಕ ನಿರೀಕ್ಷಕ ಶ್ರೀ ನಂಜುಂಡಸ್ವಾಮಿ ಎಂ ಹಾಗೂ ಸಬ್ ಇನ್ಸ್ ಪೆಕ್ಟರ್ ಮಂಜುನಾಥಪ್ರಸಾದ್ ಸಿ. ರವರು ತಮ್ಮ ಸಿಬ್ಬಂದಿಗಳ ಮೂಲಕ ದೊರೆತ ಖಚಿತ ವರ್ತಾಮಾನದ ಮೇರೆಗೆ ಮಂಗಳವಾರ ಆರೋಪಿಗಳಾದ ಸಣ್ಣಪ್ಪಗೌಡ ಮತ್ತುತಂಗವೇಲು ಎಂಬುವರನ್ನು ಬಂಧಿಸಿ ಅವರ ಬಳಿಯಿಂದ ತಲಾಎರಡು ಲಕ್ಷದಂತೆ ನಾಲ್ಕು ಲಕ್ಷ ರೂಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಪ್ರಮುಖ ಆರೋಪಿ ರಾಜು ಬಂಧನಕ್ಕೆ ಬಲೆ ಬೀಸಿದ್ದಾರೆ.