ನವದೆಹಲಿ: ಅಧಿವೇಶನದ ನಡುವೆ ಮಂಗಳವಾರ BJP ಸಂಸದರೆಲ್ಲರೂ ಒಂದೆಡೆ ಸೇರಿದ್ದರು. ಜೊತೆಗೆ ದೇಶಕ್ಕೆ ಸ್ವತಂತ್ರ ಬಂದು ೭೫ ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಂದ ನೂತನ ಟಾಸ್ಕ್ ನೀಡಿದ್ದಾರೆ. ಇನ್ನೂ 2047 ಕ್ಕೆ ಭಾರತಕ್ಕೆ ಸ್ವತಂತ್ರ ಬಂದು 100 ವರ್ಷ ಆಗುವ ವೇಳೆ ಭಾರತ ಹೇಗೆ ಅಭಿವೃದ್ಧಿಯನ್ನು ಹೊಂದಿರುತ್ತೆ ಎಂಬುದರ ಬಗ್ಗೆ ಜನರಿಂದ ನೇರವಾಗಿ ಮಾಹಿತಿಯನ್ನು ಸಂಗ್ರಹಿಸುವ ಟಾಸ್ಕ್ ನೀಡಲಿದ್ದಾರೆ ಮೋದಿಜಿ. ಇನ್ನೂ ಪ್ರತಿ ವಿಧಾನಸಭಾ ಕ್ಷೇತ್ರದಿಂದ ೨ ಕಾರ್ಯಕರ್ತರ ಜೋಡಿಯನ್ನು ಸಿದ್ಧಪಡಿಸಬೇಕು. ಜೊತೆಗೆ ಈ ಜೋಡಿಯು 75 ಗ್ರಾಮಗಳ ಪ್ರವಾಸವನ್ನು ಮಾಡಿ, ಒಂದು ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಬೇಕು. ಹಾಗೂ ಡಿಜಿಟಲ್ ಲಿಟ್ರೆಸೆಯಲ್ಲಿ ನಮ್ಮ ದೇಶವು ಈ ವರೆಗೂ ಎಲ್ಲಿಯ ವರೆಗೆ ತಲುಪಿದೆ ಮತ್ತು ಎಲ್ಲಿಯವರೆಗೂ ತಲುಪಬಹುದು ಎಂಬ ಮಾಹಿತಿಯನ್ನು ಸಂಗ್ರಹಿಸಬೇಕು.
ಇನ್ನೂ ಇದೆ ವೇಳೆ ದೇಶಕ್ಕಾಗಿ ನಾನೇನು ಮಾಡಬಲ್ಲೆ ಅನ್ನೋ ಭಾವನೆಯನ್ನು ಜನರಲ್ಲಿ ಹುಟ್ಟು ಹಾಕಬೇಕು ಎಂದು ಪ್ರಧಾನಿಯವರು ಎಲ್ಲ ಸಂಸದರನ್ನು ಒಂದೆಡೆ ಸೇರಿಸಿದ್ದರು. ಇನ್ನೂ
ದೇಶಕ್ಕೆ ಸ್ವತಂತ್ರ ಸಿಕ್ಕ ಈ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯಕ್ರಮ ಜನಾಂದೋಲನ ಆಗಬೇಕು. ಹಾಗೂ ೭೫ ವರ್ಷದ ಸಂಭ್ರಮಾಚರಣೆಯಲ್ಲಿ ೭೫ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿಯ ಜನತೆಯೊಂದಿಗೆ ೭೫ ಗಂಟೆ ಸಮಯ ಕಳೆಯಿರಿ. ಹಾಗೂ ಆ ಸಮಯದಲ್ಲಿ ದೇಶದ ಸಾಧನೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಇದು ಸರ್ಕಾರದ ಕಾರ್ಯಕ್ರಮ ಆಗದಂತೆ ಎಚ್ಚರಿಕೆಯನ್ನು ವಹಿಸಬೇಕು.
ಜೊತೆಗೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗಿ ಆಗುವಂತೆ ನೋಡಿಕೊಳ್ಳುವ ಮೂಲಕ ಜನಾಂದೋಲನವಾಗಿ ಬದಲಾಗಬೇಕೆಂದು ಸಂಸದರಿಗೆ ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರತಿಬಾರಿಯೂ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ಎಲ್ಲರೂ ಸಿದ್ಧವಾಗಿರಬೇಕು ಎಂದು ಸಂಸದರಿಗೆ ಹೇಳಿದ್ದಾರೆ. ಇನ್ನೂ ಆಗಸ್ಟ್ ೧೫ರ ಹೊಸ ಟಾಸ್ಕ್ ಅನ್ನು ಆಗಸ್ಟ್ ೧೫ರ ಧ್ವಜಾರೋಹಣ ಬಳಿಕ ಮೋದಿಯವರು ಬಹಿರಂಗವಾಗಿ ಘೋಷಣೆಯನ್ನು ಮಾಡುವ ಎಲ್ಲ ಸಾಧ್ಯತೆಗಳಿವೆ.
ಇನ್ನೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿಯವರು, ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ರು. ಕೇಂದ್ರ ಸರ್ಕಾರವು CAA ನಿಯಮಗಳನ್ನು ನೋಟಿಫೈ ಮಾಡಲು ತಾರಿಕನ್ನು ನಿಗದಿಗೊಳಿಸಿದೆಯೇ? ದಿನಾಂಕ ನಿಗದಿ ಆಗಿದ್ರೆ ದಿನಾಂಕ ತಿಳಿಸಿ? ಇಲ್ಲ ಅಂದ್ರೆ ಯಾಕೆ ಎಂದು ಪ್ರಶ್ನೆ ಮಾಡಿದ್ರು. ಇನ್ನೂ ಗೌರವ್ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವಾಲಯ, ಡಿಸೆಂಬರ್ ೧೨, 2019 ರಂದು CAA ನೋಟಿಫೈ ಮಾಡಲಾಗಿತ್ತು. ಇನ್ನೂ 2020ರಲ್ಲಿ CAA ಕಾನೂನಿನ ರೂಪ ಪಡೆದುಕೊಂಡಿತ್ತು.
ಆದರೆ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿ ಈ ಕಾನೂನಿನ ನಿಯಮಗಳನ್ನು ಸಿದ್ಧಪಡಿಸಲು ಜನೆವರಿ 2022 ರವರೆಗೆ ಸಮಯ ಕೇಳಿದೆ ಎಂದು ಉತ್ತರ ನೀಡಿತ್ತು. ಇನ್ನೂ ಕೇಂದ್ರ ಸರ್ಕಾರವು 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ ಎಂದಿದ್ದಾರೆ.