ರಾಮನಗರ: ನಾನು 2 ಬಾರಿಯೂ ಮುಖ್ಯಮಂತ್ರಿ ಯಾಗಿದ್ದು, ಅದೃಷ್ಟದಿಂದಲೇ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ. ಇನ್ನೂ ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನವನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕೆ ಅವರು, ಜೆಡಿಎಸ್‍ಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬ ವಿಶ್ವಾಸ ನನಗಿದೆ. ಜೊತೆಗೆ ನಾನು 2 ಬಾರಿಯೂ ಅದೃಷ್ಟದಿಂದಲೇ ಮುಖ್ಯಮಂತ್ರಿ ಆಗಿದ್ದೇನೆ. ಇನ್ನೂ ಜನರ ಆರ್ಶೀವಾದದಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ಜೊತೆಗೆ ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡ್ತಾಳೆ ಎಂದಿದ್ದಾರೆ.
ಇನ್ನೂ ರಾಜ್ಯದ ಜನರ ಪರವಾಗಿ JDS ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಜೆ.ಡಿ.ಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ. ಇನ್ನೂ ತಾಯಿ ಚಾಮುಂಡೇಶ್ವರಿ ಜೆ.ಡಿ.ಎಸ್‍ಗೆ ಅಧಿಕಾರ ಕೊಡ್ತಾಳೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ. ಇನ್ನೂ BJP ಪಕ್ಷದ ಹೊಸ ಮುಖ್ಯಮಂತ್ರಿ ಆಯ್ಕೆಯ ವಿಚಾರವಾಗಿ ಮಾತನಾಡಿದ ಎಚ್ಡಿಕೆಯವರು, ಅದು ಬಿ.ಜೆ.ಪಿ ಪಕ್ಷದ ಆಂತರಿಕ ವಿಚಾರ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಇನ್ನೂ ಪ್ರಧಾನಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡತ್ತೆ ಎಂದು ಎಂದಿದ್ದಾರೆ.
ಜೊತೆಗೆ ಯಡಿಯೂರಪ್ಪನವರ ಪರವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವಿಚಾರವಾಗಿ ಮಾತನಾಡಿದ ಎಚ್ಡಿಕೆಯವರು, ಇದು ಒಂದು ಸಮುದಾಯ ಒಲಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವಾಗಿದೆ. ಇನ್ನೂ JDS ಪಕ್ಷವು ಬೆಳವಣಿಗೆಯ ಲಾಭದ ಬಗ್ಗೆ ಯಾವತ್ತು ಚಿಂತಿಸುವುದಿಲ್ಲ. ಜೊತೆಗೆ ಜನರ ಪರವಾಗಿ ಸರ್ಕಾರ ಚಿಂತಿಸಲಿ ಎಂದು ಹೇಳುತ್ತೇನೆ. ಇನ್ನೂ ಎಚ್ಡಿಕೆ ಜೊತೆ ಅನಿತಾ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ.