ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರ ಆಡಳಿತದ ಅನುಭವವನ್ನು BJP ಪಕ್ಷ ಬಳಸಿಕೊಳ್ಳಲಿದೆ. ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಇನ್ನೂ ಬೆಂಗಳೂರಿಗೆ ಆಗಮಿಸಿರುವ ಅರುಣ್ ಸಿಂಗ್ ಅವರು ಮಾಧ್ಯಮಗಾರರ ಮುಂದೆ ಯಡಿಯೂರಪ್ಪನವರ ಮಾರ್ಗದರ್ಶನವನ್ನು ಪಡೆಯಲಿದ್ದೇವೆ ಎಂದಿದ್ದಾರೆ. ಇನ್ನೂ ೨ ವರ್ಷ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಬಿ.ಎಸ್.ವೈ ಮಾಡಿದ್ದಾರೆ. ಜೊತೆಗೆ ತಮ್ಮ ಆಡಳಿತಾ ಅವಧಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಇನ್ನೂ ಯಡಿಯೂರಪ್ಪನವರಿಗೆ ಪಕ್ಷ ಸಂಘಟನೆ ಮತ್ತು ಸರ್ಕಾರದಲ್ಲಿ ಸಾಕಷ್ಟು ಅನುಭವವಿದೆ. ಜೊತೆಗೆ ಎಲ್ಲಾ ವರ್ಗಕ್ಕಾಗಿ ಬಿ.ಎಸ್.ವೈಯವರು ದುಡಿದ್ದಾರೆ. ಇನ್ನೂ ಮುಂದೆಯೂ ಅವರ ಮಾರ್ಗದರ್ಶನದಲ್ಲಿಯೇ ಬಿಜೆಪಿ ಮುಂದುವರಿಯಲಿದೆ ಎಂದಿದ್ದಾರೆ. ಜೊತೆಗೆ ಬಿ.ಎಸ್.ವೈ ಅವರ ಅನುಭವಗಳನ್ನು ಮುಂದೆ ಪಕ್ಷ ಬಳಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಇನ್ನೂ ಬಿ.ಎಸ್.ವೈ ಮುಖ್ಯಮಂತ್ರಿ ಅವಧಿಯಲ್ಲಿ ಮಾಡಿರುವ ಕಾರ್ಯ ಶ್ಲಾಘಿಸಿದ ಅರುಣ್ ಸಿಂಗ್, ಇನ್ನು ಕೂಡ ಪಕ್ಷಕ್ಕೆ ಯಡಿಯೂರಪ್ಪನವರ ಸಲಹೆ ನಿರಂತರವಾಗಿರಲಿದೆ ಎಂದು ತಿಳಿಸಿದ್ರು. ಇನ್ನೂ ಇದೇ ವೇಳೆ BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಎಲ್ಲವನ್ನೂ ರಾಷ್ಟ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದ್ರು.
ಇನ್ನೂ ಸಿಎಂ ಯಾರ ಆಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಜೊತೆಗೆ ೨ ಮತ್ತು ೩ ದಿನಗಳಲ್ಲಿ ಎಲ್ಲವೂ ಅಂತಿಮ ಆಗಲಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇನ್ನೂ ಸಿಎಂ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ಹಿನ್ನೆಲೆ ಮುಂದಿನ ಸಿಎಂ ಯಾರ ಆಗಬೇಕು ಎಂಬ ಕುತೂಹಲ ಮತ್ತು ಚರ್ಚೆಗಳು ಶುರುವಾಗಿದೆ. ಇನ್ನೂ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಹೆಸರ್ರು ಸಹ ಕೇಳಿ ಬರುತ್ತಿದೆ.