ಕೂಗು ನಿಮ್ಮದು ಧ್ವನಿ ನಮ್ಮದು

ಯಾರೇ ಸಿಎಂ ಆದರೂ ನಾವು ಒಪ್ಪಿಕೊಳ್ಳುತ್ತೇವೆ: ಮುರಗೇಶ ನಿರಾಣಿ ಸ್ಪಷ್ಟನೆ

ಬೆಂಗಳೂರು: ಜಾತ್ಯಾತೀತವಾಗಿ ಬೆಳೆಸಿದ ನಾಯಕ ಯಡಿಯೂರಪ್ಪ. ಯಡಿಯೂರಪ್ಪ ಅವರ ರಾಜೀನಾಮೆಯಿಂದ ನನ್ನ ಕಣ್ಣಲ್ಲಿ ಸಹ ನೀರು ಬಂತು. ಹೈಕಮಾಂಡ್ ಗೆ ಆಜ್ಞೆಯಿಂದ ಅವರು ಸಂತೋಷ ದಿಂದ ರಾಜೀನಾಮೆ ನೀಡಿದ್ದಾರೆ. 120 ಶಾಸಕರು ಸಹ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಆದರೆ ಹೈಕಮಾಂಡ್ ಮತ್ತು ಸಂಘ ಪರಿವಾರದ ಸೂಚನೆಯ ಮೂಲಕ ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.

ದೆಹಲಿಗೆ ಹೋಗಿದ ಸಮಯದಲ್ಲಿ ಯಾವ ನಮ್ಮ ನಾಯಕರನ್ನು ಬೇಟಿಯಾಗಿಲ್ಲ ಎಂದರು. ರಾಜ್ಯದ ನಾಯಕರು ಸಂಘ ಪರಿಹಾರದ ಹಿರಿಯರು ಒಂದು ನಿರ್ಣಯ ತಗೆದುಕೊಳ್ಳುತ್ತಾರೆ, ಆ ನಿರ್ಣಯಕ್ಕೆ ಎಲ್ಲರೂ ಒಪ್ಪುತ್ತೇವೆ ಎಂದು ನಿರಾಣಿ ಬೆಂಗಳೂರಿನಲ್ಲಿ ಹೇಳುವುದರ ಮೂಲಕ ಮುಂದಿನ ಸಿಎಂ ಯಾರು ಎಂಬುವ ಕುತೂಹಲಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.

error: Content is protected !!