ಕೂಗು ನಿಮ್ಮದು ಧ್ವನಿ ನಮ್ಮದು

ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿರುವ ವಾಟಾಳ್ ನಾಗರಾಜ್ ಬಂಧನ, ಬಿಡುಗಡೆ

ಬೆಂಗಳೂರು: ಚಿನ್ನದ ಗಡಿ ನಾಡು ಕೋಲಾರದ KGF ತಮಿಳು ನಾಮಫಲಕವನ್ನು ಹಾಕಿರೋದನ್ನು ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ರವರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ರು. ಇನ್ನೂ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರೋ ಕೋಲಾರದ KGF ನಲ್ಲಿ ತಮಿಳುಮಯ ಆಗುತ್ತಿದೆ. ಮತ್ತು ಅಲ್ಲಿನ ನಗರಸಭೆ ತಮಿಳು ನಗರಸಭೆಯಾಗಿದೆ. ಮತ್ತು ನಗರಸಭೆಯು ಅಗತ್ಯ ರಾಜ್ಯಕ್ಕೆ ಇಲ್ಲ, ಜೊತೆಗೆ ಈ ಕೂಡಲೇ KGF ನಗರ ಸಭೆಯನ್ನು ವಜಾ ಮಾಡುವಂತೆ, ಒತ್ತಾಯಿಸಿ ಇವತ್ತು ರಾಜಭವನಕ್ಕೆ ಮುತ್ತಿಗೆ ಹಾಕಲು ವಾಟಾಳ್ ಮುಂದಾಗಿದ್ರು.

ಇನ್ನೂ ವಾಟಾಳ್ ನಾಗರಾಜ್ ರಾಜಭವನಕ್ಕೆ ಮುತ್ತಿಗೆ ಹಾಕಲು ಮನೆಯಿಂದ ಹೋಗುತ್ತಿದ್ದಂತೆ ನಗರದ ಪೊಲೀಸರು ಅವರನ್ನು ವಶಕ್ಕೆ ಪಡೆದ ಘಟನೆ ಇವತ್ತು ಸಂಭವಿಸಿದೆ. ಇನ್ನೂ ಕನ್ನಡ ನಾಡಿನಲ್ಲಿ ಕನ್ನಡವೇ ಮುಖ್ಯ, ಕನ್ನಡ ವಿರೋಧಿ ಚಟುವಟಿಕೆಗಳು ನಡೆಯ ಬಾರದು ಎನ್ನುವ ವಿಷಯಕ್ಕೆ ವಾಟಾಲ್ ಮತ್ತು ತಂಡ ಹೋರಾಟಕ್ಕೆ ಮುಂದಾಗಿತ್ತು.


ಜೊತೆಗೆ ಇವತ್ತು ರಾಜ್ಯ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರಾಜ್ಯ ಪಾಲರನ್ನ ಭೇಟಿ ಮಾಡುವ ಸಾಧ್ಯತೆಗಳು ಇರುವ ಕಾರಣದಿಂದ ರಾಜಭವನಕ್ಕೆ ಸೂಕ್ತ ಭದ್ರತೆಯನ್ನ ಪೊಲೀಸರು ನೀಡಿದ್ದರು. ಹಾಗಾಗಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ವಾಟಾಳ್ ನಾಗರಾಜ್ರನ್ನು ಪೊಲೀಸರು ಬಂಧನ ಮಾಡಿ ಬಳಿಕ ಬಿಡುಗಡೆ ಮಾಡಿದ್ದಾರೆ.

error: Content is protected !!